ಕಮಲ್​ ಹಾಸನ್​, ರಜನಿಕಾಂತ್​, ವಿಜಯ್​ ಇವರೆಲ್ಲ… ಸ್ಟಾರ್​ ನಟರ ಬಗ್ಗೆ ನಟಿ ಸುಹಾಸಿನಿ ಬಿಚ್ಚುಮಾತು | Suhasini

suhasini
Published on

ತಮಿಳುನಾಡು: ಕನ್ನಡದ 'ಅಮೃತವರ್ಷಣಿ' ಸಿನಿಮಾದಲ್ಲಿ ರಮೇಶ್​ ಅರವಿಂದ್​ ಜತೆ ಅಭಿನಯಿಸಿ, ಕನ್ನಡಿಗರ ಪ್ರೀತಿಗೆ ಪಾತ್ರರಾದ ಕಾಲಿವುಡ್​ನ ಸ್ಟಾರ್​ ನಿರ್ದೇಶಕ ಮಣಿರತ್ನಂ ಅವರ ಧರ್ಮಪತ್ನಿ, ಬಹುಭಾಷಾ ಹಿರಿಯ ನಟಿ ಸುಹಾಸಿನಿ ಮಣಿರತ್ನಂ (Suhasini Maniratnam), ಇತ್ತೀಚೆಗಷ್ಟೇ ತಮಿಳು ಚಿತ್ರರಂಗ ಹಾಗೂ ನಟರ ಕುರಿತು ಹಲವು ಕುತೂಹಲಕಾರಿ ಸಂಗತಿಗಳನ್ನು ಮುಕ್ತವಾಗಿ ಕ್ಯಾಮರಾ ಮುಂದೆ ಹಂಚಿಕೊಂಡಿದ್ದಾರೆ. ಸದ್ಯ ಈ ವಿಷಯಗಳು ಇದೀಗ ಜಾಲತಾಣಗಳಲ್ಲಿ ಹರಿದಾಡಿದ್ದು, ಸಿನಿಪ್ರಿಯರು ಹಾಗೂ ಆಯಾ ನಟರ ಅಭಿಮಾನಿಗಳ ಗಮನ ಸೆಳೆದಿದೆ. ಅಷ್ಟಕ್ಕೂ ಸುಹಾಸಿನಿ ಅವರು ಹಂಚಿಕೊಂಡ ಸಂಗತಿಗಳೇನು ಎಂಬುದರ ವಿವರ ಹೀಗಿದೆ.

ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ಹಿರಿಯ ನಟಿ, “ತಮಿಳು ಚಲನಚಿತ್ರೋದ್ಯಮದಲ್ಲಿ, ಸುಸ್ಥಾಪಿತ ನಿರ್ದೇಶಕರಿಗೆ ನಿಜವಾಗಿಯೂ ರೆಡ್ ಕಾರ್ಪೆಟ್ ಸಿಗುವುದಿಲ್ಲ. ಹೊಸ ನಿರ್ದೇಶಕರಿಗೆ ಮಾತ್ರ ರೆಡ್ ಕಾರ್ಪೆಟ್ ಹಾಕಲಾಗುತ್ತಿದೆ. ಸ್ಟಾರ್​ ನಟರಾದ ಕಮಲ್ ಹಾಸನ್, ರಜನಿಕಾಂತ್, ವಿಜಯ್, ಅಜಿತ್ ಕುಮಾರ್ ಇವರೆಲ್ಲ ಹೊಸಬರೊಂದಿಗೆ ಕೆಲಸ ಮಾಡಲು ಹೆಚ್ಚು ಬಯಸುತ್ತಿದ್ದಾರೆಯೇ ವಿನಃ ಹಳೆಯ ಡೈರೆಕ್ಟರ್​ಗಳ ಜತೆ ಕೆಲಸ ಮಾಡಲು ಮುಂದಾಗುತ್ತಿಲ್ಲ. ಕಳೆದ 20 ಅಥವಾ 10 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಿರ್ದೇಶಕರೊಂದಿಗೆ ಇವರು ಕೈಜೋಡಿಸಲು ಇಚ್ಛಿಸುತ್ತಿಲ್ಲ" ಎಂದು ಹೇಳಿದರು.

"ಪ್ರಸ್ತುತ ದಿನಗಳಲ್ಲಿ ತಮ್ಮ ಚೊಚ್ಚಲ ಸಿನಿಮಾ ಮಾಡುವ ಹಂಬಲ ವ್ಯಕ್ತಪಡಿಸುವ ಹೊಸ ನಿರ್ದೇಶಕರಿಗೆ ಒಂದು ಚಿತ್ರ ಡೈರೆಕ್ಟ್​ ಮಾಡೋದು ಅಷ್ಟು ಕಷ್ಟವಲ್ಲ. ಬದಲಿಗೆ ತಮ್ಮ ಮೊದಲ ಪ್ರಾಜೆಕ್ಟ್ ಅನ್ನು ಗಿಟ್ಟಿಸಿಕೊಳ್ಳುವುದು ಬಹಳ ಸುಲಭ. ಹೊಸಬರಿಗೆ ಚಿತ್ರ ಮಾಡುವುದು ಸುಲಭವಾದರೂ ನಂತರದಲ್ಲಿ ಎರಡನೇ ಅಥವಾ ಮೂರನೇ ಚಿತ್ರ ಮಾಡುವುದು ಕಷ್ಟಕರ. ಸ್ಥಾಪಿತ ನಿರ್ದೇಶಕರಿಗೆ ಎರಡನೇ ಅಥವಾ ಮೂರನೇ ಸಿನಿಮಾದ ನಿರ್ದೇಶನದ ಜವಾಬ್ದಾರಿ ಸಿಗಬಹುದು. ಆದರೆ, ಹೊಸಬರಿಗೆ ಮೂರು-ನಾಲ್ಕು ಸವಾಲು" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net