ಅಣ್ಣ ಎಂದು ರಾಖಿ ಕಟ್ಟಿದ್ಳು, ನಂತ್ರ ಆತನಿಂದಲೇ ಗರ್ಭಿಣಿಯಾದ್ಳು ಈ ನಟಿ

sridevi
Published on

ಬೆಂಗಳೂರು: ಹಿಟ್ ಸಿನಿಮಾಗಳನ್ನು ನೀಡಿದ್ದ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ. ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಫೇಮಸ್ ಆಗಿದ್ದಾರೆ. ಈಕೆ ಮತ್ತು  ಬೋನಿ ಕಪೂರ್ ಲವ್ ಸ್ಟೋರಿ ಯಾವ ಸಿನಿಮಾಗೂ ಕಡಿಮೆ ಇಲ್ಲ.

ಬೋನಿ ಕಪೂರ್ ಅವರ ಮೊದಲ ಹೆಂಡತಿಯ ಹೆಸರು ಮೋನಾ ಕಪೂರ್ ಅವರು, ಶ್ರೀದೇವಿಗೆ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಈ ಕಾರಣಕ್ಕಾಗಿ ಮೋನಾ ಒಮ್ಮೆ ಶ್ರೀದೇವಿ ಅವರ ಮನೆಯಲ್ಲಿ ಉಳಿಯಲು ಸ್ಥಳವನ್ನು ನೀಡಿದ್ದರು. ಆ ದಿನಗಳಲ್ಲಿ, ಶ್ರೀದೇವಿ, ಮಿಥುನ್ ಚಕ್ರವರ್ತಿ ಜತೆ ಡೇಟಿಂಗ್ ಮಾಡುತ್ತಿದ್ದರು ಮತ್ತು ಬೋನಿ ಕಪೂರ್ ಕೂಡ ಮೋನಾ ಜತೆ ತುಂಬಾ ಸಂತೋಷವಾಗಿದ್ದರು. ಆದರೆ, ಮಿಥುನ್‌’ಗೆ ಶ್ರೀದೇವಿ ಮತ್ತು ಬೋನಿ ಕಪೂರ್ ಮೇಲೆ ಸ್ವಲ್ಪ ಅನುಮಾನವಿತ್ತು. ಈ ಕಾರಣಕ್ಕಾಗಿ ಮಿಥುನ್ ಮೇಲೆ ನಂಬಿಕೆ ಬರುವಂತೆ ಬೋನಿ ಕಪೂರ್ ಗೆ ಶ್ರೀದೇವಿ ರಾಖಿ ಕಟ್ಟಿದ್ದರು.

'ಮಿಸ್ಟರ್ ಇಂಡಿಯಾ' ಚಿತ್ರದ ಪಾತ್ರದೊಂದಿಗೆ ಬೋನಿ ಕಪೂರ್ ಶ್ರೀದೇವಿಗೆ ಮತ್ತಷ್ಟು ಹತ್ತಿರವಾಗಿ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದರು. ಇದಾದ ನಂತರ ಇಬ್ಬರೂ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಶ್ರೀದೇವಿ ಬೋನಿ ಕಪೂರ್ ಅವರನ್ನು ತನ್ನ ಸಹೋದರ ಎಂದು ಕರೆದ ಕಾರಣ ಬೋನಿ ಕಪೂರ್ ಅವರ ಬೆಳೆಯುತ್ತಿರುವ ಸ್ನೇಹಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಈ ಮಧ್ಯೆಯೇ ಶ್ರೀದೇವಿ  ಗರ್ಭಿಣಿಯಾಗಿದ್ದರು.

ಮೋನಾ ಕಪೂರ್ ಮತ್ತು ಬೋನಿ ಕಪೂರ್ ವಿಚ್ಛೇದನ ಪಡೆದರು. ಮೋನಾ ಮತ್ತು ಬೋನಿಗೆ ಅರ್ಜುನ್ ಮತ್ತು ಅಂಶುಲಾ ಹೆಸರಿನ ಮಕ್ಕಳಿದ್ದಾರೆ. ಆ ಬಳಿಕ 1996 ರಲ್ಲಿ, ಬೋನಿ ಕಪೂರ್ ಶ್ರೀದೇವಿಯನ್ನು ದೇವಸ್ಥಾನದಲ್ಲಿ ವಿವಾಹವಾದರು. ಆದರೆ ಈ ಸಂದರ್ಭದಲ್ಲಿ ಶ್ರೀದೇವಿಯನ್ನು ಮನೆ ಮುರಿದವಳು ಎಂದೆಲ್ಲಾ ಟೀಕೆ ಮಾಡಲು ಪ್ರಾರಂಭಿಸಿದ್ದರು. ಆದರೆ ಈ ಇಬ್ಬರ ಸುಖವಾದ ಜೀವನ ನಡೆಸಿದರು. ಶ್ರೀದೇವಿಯೊಂದಿಗಿನ ಮದುವೆಯ ನಂತರ ಅರ್ಜುನ್ ಮತ್ತು ಮಗಳು ಅಂಶುಲಾ ಬೋನಿ ಕಪೂರ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರು. ಶ್ರೀದೇವಿ ಸಾವಿನ ಬಳಿಕ ಅರ್ಜುನ್ ಕಪೂರ್ ಮನಸ್ಸು ಬದಲಾಯಿತು. ಶ್ರೀದೇವಿ ಅವರಿಗೆ ಜಾನ್ವಿ ಮತ್ತು ಖುಷಿ ಹೆಸರಿನ ಹೆಣ್ಣು ಮಕ್ಕಳಿದ್ದಾರೆ. 2018ರಲ್ಲಿ ಶ್ರೀದೇವಿ ದುಬೈನ ಹೋಟೆಲ್ ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅವರ ಸಾವಿನ ಬಗ್ಗೆ ಇನ್ನೂ ಅನೇಕರಿಗೆ ಅನುಮಾನ ಇದೆ.

ಬೋನಿ ಕಪೂರ್ ಅವರು ಬಾಲಿವುಡ್​ನ ಖ್ಯಾತ ನಿರ್ಮಾಪಕ. ಶ್ರೀದೇವಿ, ತಮ್ಮ ವೃತ್ತಿಜೀವನದಲ್ಲಿ 'ಮಿಸ್ಟರ್ ಇಂಡಿಯಾ', 'ಜುದಾಯಿ', 'ನಾಗಿನ್', 'ಲಾಡ್ಲಾ', 'ಚಾಲ್ಬಾಜ್' ನಂತಹ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net