

ಬೆಂಗಳೂರು: ‘ನಂಜುಂಡಿ ಕಲ್ಯಾಣ’, ‘ಮಡಮಕ್ಕಿ’ ಚಿತ್ರಗಳ ಬಳಿಕ ನಟ-ನಿರ್ವಪಕ ತನುಷ್ ಶಿವಣ್ಣ ಇದೀಗ ‘ನಟ್ವರ್ಲಾಲ್’ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ‘ಅಯೋಧ್ಯಾಪುರ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ವಿ. ಲವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಇತ್ತೀಚೆಗಷ್ಟೆ ಟೀಸರ್ ಬಿಡುಗಡೆ ಮಾಡಲಾಯಿತು.
‘‘ನಟ್ವರ್ಲಾಲ್’ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ನಿರ್ವಣವಾಗಿದೆ. ಇದೊಂದು ಕ್ರೖೆಂ ಥ್ರಿಲ್ಲರ್ ಹಾಗೂ ಆಕ್ಷನ್ ಜಾನರ್ ಚಿತ್ರವಾಗಿದ್ದು, ನಮ್ಮ ಸುತ್ತಮುತ್ತ ನಡೆಯುವ ನೈಜ ಘಟನೆಗಳನ್ನು ಆಧರಿಸಿ ಕಥೆ ಮಾಡಿಕೊಂಡಿದ್ದೇನೆ. ಮೆಡಿಕಲ್ ಮಾಫಿಯಾ, ಪೊಲಿಟಿಕಲ್ ಮಾಫಿಯಾ, ಹ್ಯಾಕರ್ಸ್ ಕುರಿತ ವಿಷಯಗಳು ಚಿತ್ರದಲ್ಲಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ನಿರ್ದೇಶಕ ಲವ.
ಈ ಚಿತ್ರದ ಕುರಿತು ಮಾತನಾಡುವ ತನುಷ್, ‘ಹಲವು ಕುತೂಹಲಕಾರಿ ಅಂಶಗಳು ಚಿತ್ರದ ಕಥೆಯಲ್ಲಿ ಇರುತ್ತವೆ ಎಂದು ನಿರ್ದೇಶಕ ಲವ ಹೇಳಿದಾಗ ನನಗೆ ಇಷ್ಟವಾಯಿತು. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂದು ಹೇಳಿಕೊಂಡರು. ಅವರಿಗೆ ನಾಯಕಿಯಾಗಿ ಸೋನಲ್ ಮೊಂತೆರೊ ನಟಿಸಿದ್ದಾರೆ.