ಗಂಡು ಮಗುವಿಗೆ ಜನ್ಮ ನೀಡಿದ 'ಜೋಶ್' ನಟಿ ಪೂರ್ಣಾ

Actress Shamna Kasim aka Poorna blessed with a baby boy
Published on

ದುಬೈ: 'ಜೋಶ್' ಸಿನಿಮಾ ನಾಯಕಿ ಪೂರ್ಣಾ ಗಂಡು ಮಗುವಿಗೆ ಜನ್ಮ ನೀಡಿದದ್ದಾರೆ. ದುಬೈ ಆಸ್ಪತ್ರೆಯಲ್ಲಿ ನಟಿ ಮಗುವಿಗೆ ಜನ್ಮ ನೀಡಿದ್ದು, ಫೋಟೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದುಬೈನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಗಂಡು ಮಗು ಆಗಮಿಸಿದ್ದಾನೆ. ಆಶೀರ್ವಾದ ಮಾಡಿದ ಎಲ್ಲರಿಗೂ ಧನ್ಯವಾದಗಳು. ಪೂರ್ಣ ಮತ್ತು ಶಾನಿದ್ ದಂಪತಿ ಮಗನ ಜೊತೆ ಇರುವ ಫೋಟೋ ಶೇರ್ ಮಾಡಿದ್ದಾರೆ. ಆದರೆ ಮಗನ ಮುಖ ರಿವೀಲ್ ಮಾಡಿಲ್ಲ. ಮನೆಗೆ ಮಗ ಬಂದಿರುವ ಸಂತಸದ ವಿಚಾರವನ್ನು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ಪೂರ್ಣಾ ಮೂಲ ಹೆಸರು ಶಾಮ್ನಾ ಕಾಸೀಮ್. ಆದರೆ ಪೂರ್ಣ ಹೆಸರಿನ ಮೂಲಕವೇ ಖ್ಯಾತಿಗಳಿಸುವ ನಟಿ. ಪೂರ್ಣಾ ಅಲಿಯಾಸ್​ ಶಮ್ನಾ ಕಾಸಿಮ್ ದುಬೈ ಮೂಲದ ಉದ್ಯಮಿ ಶಾನಿದ್ ಆಸಿಫ್ ಜೊತೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಫೆಬ್ರವರಿ ತಿಂಗಳಲ್ಲಿ ನಟಿ ಪೂರ್ಣ ಸೀಮಂತ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿದ್ದರು. ಒಂದಿಷ್ಟು ಫೋಟೋಶೂಟ್ ಮಾಡಿಸಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಗಂಡು ಮಗುವಿಗೆ ತಾಯಿ ಆಗಿದ್ದೇನೆಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net