Shamitha Shetty - ವಯಸ್ಸಾಯ್ತು, ಮದುವೆಯಾಗಿ ಎಂದವನಿಗೆ ನಟಿ ಶಮಿತಾ ಕ್ಲಾಸ್

ಶಮಿತಾ ಶೆಟ್ಟಿ
ಶಮಿತಾ ಶೆಟ್ಟಿ
Published on
Shamitha Shetty -
ಮಂಗಳೂರು ಮೂಲದ ಕನ್ನಡತಿ ಶಿಲ್ಪಾ ಶೆಟ್ಟಿ ಮತ್ತು ಶಮಿತಾ ಶೆಟ್ಟಿ, ಕಳೆದ ಹಲವು ದಶಕಗಳಿಂದ ಬಾಲಿವುಡ್​ನಲ್ಲಿ ಸೆಟಲ್​ ಆಗಿದ್ದಾರೆ. 50 ವರ್ಷದ ಶಿಲ್ಪಾ ಶೆಟ್ಟಿ ಈಗಾಗಲೇ ಮದುವೆಯಾಗಿ 14 ವರ್ಷದ ಮಗನಿದ್ದಾನೆ. ಆದರೆ, 47ರ ಶಮಿತಾ ಇನ್ನೂ ಮದುವೆಯಾಗಿಲ್ಲ. ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಶಮಿತಾಗೆ ಸಿನಿಮಾಗಿಂತ ಮದುವೆಯ ಕುರಿತ ಪ್ರಶ್ನೆಗಳೇ ಹೆಚ್ಚು. ಇನ್ನು ಜಾಲತಾಣದಲ್ಲಿ ಅವರಿಗೆ ಪ್ರತಿದಿನ ಮದುವೆಯ ಕುರಿತ ಪ್ರಶ್ನೆಗಳು ಬರುತ್ತಲೇಯಿರುತ್ತವೆ. ಇತ್ತೀಚೆಗಷ್ಟೆ ಮದುವೆ, ವಯಸ್ಸಿಗೆ ಸಂಬಂಧಿಸಿದಂತೆ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಅವರನ್ನು ಸಾಲು ಪ್ರಶ್ನೆಗಳ ಮೂಲಕ ಟ್ರೋಲ್​ ಮಾಡಿದ್ದು, ಅದಕ್ಕೆ ಶಮಿತಾ ಉತ್ತರಿಸಿದ್ದಾರೆ.
""ನಿಮಗೆ ವಯಸ್ಸಾಗಿದೆ, ನೀವೀಗ ಮೊದಲಿನಂತಿಲ್ಲ' ಎನ್ನುತ್ತಾರೆ. ಹೌದು, ನಾನೀಗ ವಿಭಿನ್ನವಾಗಿ ಕಾಣುತ್ತೇನೆ. ಸಮಯ ಕಳೆದಂತೆ ಬದಲಾಗುವುದು ಪ್ರಾಕೃತಿಕ ನಿಯಮ. ನಮ್ಮ ಲುಕ್ಸ್​ ಮಾತ್ರವಲ್ಲ, ಯಾವುದೂ ಶಾಶ್ವತವಲ್ಲ. ಆದರೆ, ಈ ವಯಸ್ಸಿನಲ್ಲೂ ನಾನು ಆರೋಗ್ಯವಾಗಿದ್ದೇನೆ, ಫಿಟ್​ ಆಗಿ, ಖುಷಿಯಾಗಿದ್ದೇನೆ. ನನಗೆ ದೇವರು ಏನು ಕೊಟ್ಟಿದ್ದಾನೋ, ಅದರಲ್ಲಿ ಖುಷಿಯಾಗಿದ್ದೇನೆ. ಅಷ್ಟೇ ಸಾಕು. "ವಯಸ್ಸಿಗೆ ಸರಿಯಾಗಿ ಮದುವೆಯಾಗಿದ್ದರೆ, ಇಷ್ಟು ಹೊತ್ತಿಗಾಗಲೇ ಮಕ್ಕಳು ದೊಡ್ಡವಾಗಿರುತ್ತಿದ್ದರು' ಎನ್ನುತ್ತಾರೆ. ಹೌದು, ನೀವು ಹೇಳಿದ್ದು ಸರಿನೇ? ಆದರೆ, ಅದಕ್ಕೆ ನಾನೇನು ಮಾಡಲಿ? ನೀವು ಮದುವೆಯಾಗಿ ಏನು ಸಾಧಿಸಿದ್ದೀರಿ? ಎಲ್ಲಕ್ಕಿಂತ ಮುಖ್ಯವಾಗಿ ನನ್ನಂತಹ ಮಧ್ಯ ವಯಸ್ಕಿನ ಒಂಟಿ ಮಹಿಳೆಯರನ್ನು ಏಕೆ ಜಾಲತಾಣದಲ್ಲಿ ಫಾಲೋ ಮಾಡುತ್ತೀರಿ? ನಿಮ್ಮ ಪುರುಷ ಪ್ರಧಾನ ಆಲೋಚನೆಗಳನ್ನು ನಮ್ಮ ಮೇಲೇಕೆ ಹೇರುತ್ತೀರಿ? ಒಂದು ಕೆಲಸ ಮಾಡಿ, ನನ್ನನ್ನು ಅನ್ ಫಾಲೋ ಮಾಡಿಬಿಡಿ' ಎಂದು ಶಮಿತಾ ಖಾರವಾಗಿ ನುಡಿದಿದ್ದಾರೆ. ಸದ್ಯ ಅವರ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಪರ&ವಿರೋಧದ ಚರ್ಚೆಗಳು ಸಹ ಜಾಲತಾಣದಲ್ಲಿ ಆರಂಭವಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net