ಈ ಕಾರಣಕ್ಕೆ ನಟನೆಯಿಂದ ಲಾಂಗ್ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ ಸ್ಯಾಮ್!

samantha
Published on

ಆಂಧ್ರಪ್ರದೇಶ: ಆಪ್ತ ಮೂಲಗಳ ಪ್ರಕಾರ ಸ್ಟಾರ್ ನಟಿ ಸಮಂತಾ ಕೆಲಸದಿಂದ ಲಾಂಗ್ ಬ್ರೇಕ್ ತೆಗೆದುಕೊಳ್ಳಲು ಯೋಜಿಸುತ್ತಿದ್ದಾರೆ. ಹೌದು, ನಟನೆಯಿಂದ ಸಮಂತಾ ಒಂದು ವರ್ಷ ವಿರಾಮ ತೆಗೆದುಕೊಳ್ಳಲಿದ್ದಾರೆ. ಶೀಘ್ರದಲ್ಲೇ ತಮ್ಮ ಮುಂಬರುವ ಚಿತ್ರಗಳಾದ ಖುಷಿ ಮತ್ತು ಸಿಟಾಡೆಲ್‌ನ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದು, ನಂತರ ಅವರು ಯಾವುದೇ ತೆಲುಗು ಅಥವಾ ಬಾಲಿವುಡ್ ಹೊಸ ಚಿತ್ರಗಳಿಗೆ ಸಹಿ ಹಾಕುವುದಿಲ್ಲವಂತೆ. ಇದೇ ಕಾರಣಕ್ಕೆ ಈ ಹಿಂದೆ ಮುಂಬರುವ ಕೆಲವು ಪ್ರಾಜೆಕ್ಟ್‌ಗಳಿಗೆ ತೆಗೆದುಕೊಂಡಿದ್ದ ಹಣವನ್ನು ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ.

ಪ್ರಸ್ತುತ ಸಮಂತಾ ವಿಜಯ್ ದೇವರಕೊಂಡ ನಾಯಕನಾಗಿ ನಟಿಸುತ್ತಿರುವ ತೆಲುಗು ಚಿತ್ರ ಖುಷಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಮೂರು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಜೊತೆಗೆ ಸಮಂತಾ ವೆಬ್ ಸೀರೀಸ್ ಸಿಟಾಡೆಲ್‌ ಶೂಟಿಂಗ್‌ ಸಹ ಬಹುತೇಕ ಮುಗಿದಿದೆ.

ಚಿತ್ರೀಕರಣ ಮುಗಿದ ನಂತರ ಸಮಂತಾ ನಟನೆಯಿಂದ ಒಂದು ವರ್ಷ ವಿರಾಮ ತೆಗೆದುಕೊಳ್ಳಲು ಯೋಜಿಸುತ್ತಿದ್ದಾರೆ. ತಮ್ಮ ಆರೋಗ್ಯದ ಹಿತದೃಷ್ಠಿಯಿಂದ ಸಮಂತಾ ಈ ನಿರ್ಧಾರಕ್ಕೆ ಬಂದಿದ್ದು, ಮೈಯೋಸಿಟಿಸ್‌ಗೆ ಹೆಚ್ಚುವರಿ ಚಿಕಿತ್ಸೆ ಪಡೆಯಲು ಈ ಸಮಯ ಬಳಸುತ್ತಾರಂತೆ. ಕಳೆದ ವರ್ಷ, ಅಪರೂಪದ ಕಾಯಿಲೆ ಆಟೋಇಮ್ಯೂನ್ ಬಗ್ಗೆ ತಿಳಿಸಿದ ನಂತರ ಸಮಂತಾ ಕೆಲಸದಿಂದ ವಿರಾಮ ತೆಗೆದುಕೊಂಡರು. ಆದರೆ ಕೆಲವು ತಿಂಗಳ ನಂತರ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net