ಎರಡನೇ ಮದುವೆ ಬಗ್ಗೆ ಯೋಚನೆ ಇಲ್ವಾ? ಫ್ಯಾನ್​​ ಪ್ರಶ್ನೆಗೆ ನಟಿ ಸಮಂತಾ ಕೊಟ್ಟರು ಸಖತ್​ ಉತ್ತರ….

ವಿಜಯವಾಣಿ (85)
Published on

ಹೈದರಾಬಾದ್​: ಟಾಲಿವುಡ್​ನ ಹಾಟ್​ ಬೆಡಗಿ, ನಟಿ ಸಮಂತಾ ರುತ್ ಪ್ರಭು ಸದ್ಯ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದಿದ್ದು, ತಮ್ಮ ಹೊಸ ಯೋಜನೆಗಳತ್ತ ಮುಖಮಾಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ 'ತ್ರಲಾಲಾ' ಮೂವಿಂಗ್ ಪಿಕ್ಚರ್ಸ್ ಅನ್ನು ನೂತನವಾಗಿ ಅನಾವರಣಗೊಳಿಸಿದ ನಟಿ, ಇದೀಗ ನಿರ್ಮಾಪಕಿಯಾಗಿ ಬದಲಾಗಿದ್ದಾರೆ.

ವಿಜಯ್​ ದೇವರಕೊಂಡ ಜತೆ 'ಖುಷಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದೇ ಕಡೆ, ಅದಾದ ಬಳಿಕ ಸಮಂತಾ ವಿದೇಶ ಪ್ರಯಾಣ ಬೆಳಸಿದರು. ತದನಂತರ ಒಂದಷ್ಟು ವಿಷಯಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದ್ದರು. ಇದೀಗ ನಟಿ ತಮ್ಮ ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪ್ರಶ್ನೆ ಮತ್ತು ಉತ್ತರ ಕೇಳುವ ಸಮಯ ಎಂದು ತಮ್ಮ ಅನುಯಾಯಿಗಳಿಗೆ ಕೇಳಿದ್ದಾರೆ. ಈ ವೇಳೆ ಅಭಿಮಾನಿಯೊ​ಬ್ಬರು ಎರಡನೇ ಮದುವೆ ಬಗ್ಗೆ ಯೋಚನೆ ಇಲ್ವಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಮಂತಾ ಕೊಟ್ಟ ಉತ್ತರ ಶಾಕಿಂಗ್ ಆಗಿದೆ.

ಎರಡನೇ ಮದುವೆ ಬಗ್ಗೆ ಕೇಳುತ್ತಿದ್ದಂತೆ ಉತ್ತರಿಸಿದ ಸಮಂತಾ, ನಗು ಮೊಗದ ಎಮೋಜಿ ಹಾಕಿ, ಎರಡನೇ ಮತ್ತು ಮೂರನೇ ಮದುವೆಗಳ ವಿಚ್ಛೇದನ ದರದ ಅಂಕಿಅಂಶಗಳನ್ನು ಹಂಚಿಕೊಂಡರು. ಈ ಅಂಕಿಅಂಶಗಳ ಮಾಹಿತಿ ಒಂದು ರೀತಿ ಪ್ರಶ್ನೆ ಕೇಳಿದ ವ್ಯಕ್ತಿಯ ತಲೆಗೆ ನೇರ ಹುಳ್ಳ ಬಿಟ್ಟಿರುವುದಂತು ಖಂಡಿತ ಎಂದೇ ಹೇಳಬಹುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net