ಈ ಹುಡುಗಿನ ಇಷ್ಟು ಟ್ರೋಲ್​​ ಮಾಡೋದು ಸರಿನಾ; ಹೈದ್ರಾಬಾದ್ ಹುಡುಗಿ ಎಂದವಳ ಪರ ರಮ್ಯಾ ಬ್ಯಾಟಿಂಗ್​​

Ramya Rashmika
Published on

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿಕೆ. ಶಿವಕುಮಾರ್ ಅವರ ನಟ್ಟು ಬೋಲ್ಟು ಹೇಳಿಕೆಯೂ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಹಿರಿಯ ನಟಮ ನಟಿಯರು ಸೇರಿದಂತೆ ಅನೇಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಈ ವಿಚಾರವಾಗಿ ಪ್ರಮುಖವಾಗಿ ನಟಿ ರಶ್ಮಿಕಾ ಮಂದಣ್ಣ ಹೆಸರು ಕೇಳಿ ಬರುತ್ತಿದ್ದು, ಕಾಂಗ್ರೆಸ್​ ಶಾಸಕರು ಸೇರಿದಂತೆ, ಕನ್ನಡ ಪರ ಸಂಘಟನೆಯ ಸದಸ್ಯರು ಕೊಡಗಿನ ಕುವರಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಇದೀಗ ರಶ್ಮಿಕಾ ಮಂದಣ್ಣ (Rashmika Mandanna) ಪರ ನಿಂತಿರುವ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ (Ramya) ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಮಾತನ್ನು ನಾನು ಒಪ್ಪುತ್ತೇನೆ. ಆದ್ರೆ ಅವರು ಹೇಳಿದ ರೀತಿಯನ್ನು ನಾನು ಒಪ್ಪೋದಿಲ್ಲ. ಆ ಹುಡುಗಿಯನ್ನ ಸಿಕ್ಕಾಪಟ್ಟೆ ಟ್ರೋಲ್ ಮಾಡೋದು ಎಷ್ಟು ಸರಿ ಅಂತ ಪ್ರಶ್ನಿಸಿದ್ದಾರೆ.

Ramya Rashmika

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಟಿ ರಮ್ಯಾ, ರಾಜಕಾರಣಿಗಳ ಹೇಳಿಕೆಗಳಿಂದ ಇನ್ನೊಬ್ಬರು ಟ್ರೋಲ್ ಆಗುವಂತಹ ರೀತಿಯಲ್ಲಿ ಆಗಬಾರದು. ಅಧಿಕಾರದಲ್ಲಿ ಇರಬೇಕಾದರೆ ಒಳ್ಳೆಯ ರೀತಿಯಲ್ಲಿ ಒಬ್ಬರ ಬಗ್ಗೆ ಮಾತನಾಡಿ, ಅದು ಟೀಕಿಸುವಂತೆ ಆಗಬಾರದು.

ರಶ್ಮಿಕಾ ಕನ್ನಡದಲ್ಲಿ ಮಾತಾಡಲ್ಲ ಅಂತಾರೆ, ಆಕೆ ಹೈದರಾಬಾದ್ ನನ್ನ ಊರು ಅಂತ ಹೇಳಿದ್ದಕ್ಕೆ ಟ್ರೋಲ್ ಮಾಡ್ತಾರೆ. ಈ ತರ  ಬೆದರಿಸೋದು ಸರಿಯಲ್ಲ. ಆ ಹುಡುಗಿಯನ್ನ ಅವಳ ಪಾಡಿಗೆ ನೆಮ್ಮದಿಯಾಗಿರಲು ಬಿಟ್ಟು ಬಿಡ್ಬೇಕು. ಇಲ್ಲಿ ಬಹಳ ಮುಖ್ಯವಾದ ವಿಚಾರ ಅಂದ್ರೆ ರಾಜಕಾರಣಿಗಳು ಏನಾದರೂ ಹೇಳಿಕೆ ಕೊಡುವ ಮುನ್ನ, ಅವರು ಯಾರನ್ನೂ ಟ್ರೋಲ್ ಮಾಡುವ ಹಾಗೆ ಮಾತನಾಡಬಾರದು. ಅಧಿಕಾರದಲ್ಲಿರುವ ವ್ಯಕ್ತಿ ಜನರ ಮೇಲೆ ಪ್ರಭಾವ ಬೀರುತ್ತಾರೆ. ಹೀಗಾಗಿ ರಾಜಕಾರಣಿಗಳು ಒಬ್ಬರನ್ನು ಟೀಕಿಸುವ ಮುನ್ನ ಚಿಂತಿಸಬೇಕು. ಪಾಸಿಟಿವ್ ಆಗಿರಬೇಕು, ಜನರನ್ನ ಟ್ರೋಲ್ ಮಾಡಲು ಪ್ರೇರೇಪಿಸಬಾರದು ಎಂದು ನಟಿ ರಮ್ಯಾ ರಶ್ಮಿಕಾ ಮಂದಣ್ಣ ಪರ ಬ್ಯಾಟ್ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net