VIDEO| ಮೈಸೂರಿನಲ್ಲಿ ದೋಸೆ ಸವಿದು 10ಕ್ಕೆ ಏಳು ಅಂಕ ಕೊಟ್ಟ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ragini
Published on

ಬೆಂಗಳೂರು: ಸಾಲುಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಾಗಿಣಿ ದ್ವಿವೇದಿ ಸೋಶಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದು, ಆಗಾಗ್ಗೆ ಫೋಟೋ, ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಇದೀಗ ನಟಿ ಇಡ್ಲಿ ತಿನ್ನುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಮೈಸೂರಿಗೆ ಭೇಟಿ ನೀಡಿರುವ ತಮಗೆ ಸ್ಟ್ರೀಟ್​ಫುಡ್​​ ಎಂದರೆ ಸಕತ್​ ಇಷ್ಟ ಎಂದಿರುವ ರಾಗಿಣಿ, ಮೈಸೂರಿನ ಸುತ್ತಲೂ ಚೆನ್ನಾಗಿರುವ ಆಹಾರ ಸಿಗುತ್ತದೆ. ಇಲ್ಲಿಯ ದೋಸೆ ಸಕತ್​ ಇಷ್ಟ ಎಂದಿರುವ ನಟಿ, ಉಪ್ಪಿಟ್ಟು ಮತ್ತು ಇಡ್ಲಿ ಅಷ್ಟು ಇಷ್ಟ ಆಗಲ್ಲ. ಇಡ್ಲಿ, ದೋಸೆ, ಉಪ್ಪಿಟ್ಟು ಎಲ್ಲವನ್ನೂ ತಿನ್ನುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಈ ತಿಂಡಿ ತಿಂದಾದ ಮೇಲೆ ನನಗೆ ದೋಸೆ ಸೂಪರ್ ಎನ್ನಿಸಿತು, ಇಡ್ಲಿ, ಉಪ್ಪಿಟ್ಟು ಅಷ್ಟಾಗಿ ಸೇರಲಿಲ್ಲ ಎಂದಿದ್ದಾರೆ. ದಕ್ಷಿಣ ಭಾರತದ ಅಡುಗೆಗಳೆಂದರೆ ಸೂಪರ್​ ಎಂದಿರುವ ನಟಿ, ತಮಗೆ ಸ್ಟ್ರೀಟ್​ ಫುಡ್​ ಇಷ್ಟವಾಗುತ್ತದೆ ಎಂದಿದ್ದಾರೆ. ಇವರ ವಿಡಿಯೋಗೆ ಥಹರೇವಾರಿ ಕಮೆಂಟ್ಸ್​ಗಳು ಬರುತ್ತಿವೆ. ಮೈಸೂರು ರಿಫ್ರೆಷ್​ಮೆಂಟ್​ ಸೆಂಟರ್​ನಲ್ಲಿ ಭೋಜನ ಸವಿದು 10ಕ್ಕೆ ಏಳು ಅಂಕ ಕೊಟ್ಟಿದ್ದಾರೆ.

ರಾಗಿಣಿ ಬ್ಯೂಟಿಗೆ ಮತ್ತು ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಫಿಟ್ ಆಗಿರಬೇಕು ಎಂದು ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ರಾಗಿಣಿ ದ್ವಿವೇದಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net