Priyanka Mohan: ಜಯಂ ರವಿಯೊಂದಿಗೆ ನಿಶ್ಚಿತಾರ್ಥ..ನಟಿ ಹೇಳಿದ್ದೇನು ಗೊತ್ತಾ?

jayam ravi
Published on

ಚೆನ್ನೈ: ಕಾಲಿವುಡ್ ನಟ ಜಯಂ ರವಿ ಮತ್ತು ನಟಿ ಪ್ರಿಯಾಂಕಾ ಮೋಹನ್(Priyanka Mohan) ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂದು ಇತ್ತೀಚೆಗೆ ಸುದ್ದಿ ಹರಿದಾಡುತ್ತಿದ್ದು, ಅದಕ್ಕೆ ಸಂಬಂಧಿಸಿದ ಫೋಟೋ ಕೂಡ ವೈರಲ್ ಆಗಿತ್ತು. ಆದರೆ ಇಂತಹ ಸುದ್ದಿಗಳಿಗೆ ಪ್ರಿಯಾಂಕಾ ಮೋಹನ್ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ನನ್ನ ಮತ್ತು ಜಯಂ ರವಿ ಕುರಿತಾದ ಸ್ಟೋರಿಗಳನ್ನು ನೋಡಿ ಬೆಚ್ಚಿಬಿದ್ದಿದ್ದೇನೆ. ಹೀಗಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಎಂದರು.

ನಾನು ಮತ್ತು ಜಯಂ ರವಿ 'ಬ್ರದರ್' ಚಿತ್ರಕ್ಕೆ ಒಟ್ಟಿಗೆ ಕೆಲಸ ಮಾಡಿದ್ದೇವೆ. ಚಿತ್ರದ ಪ್ರಚಾರದ ಭಾಗವಾಗಿ ಚಿತ್ರತಂಡ ನಮ್ಮಿಬ್ಬರ ಕೊರಳಿಗೆ ಹಾರ ಹಾಕಿರುವ ಫೋಟೋವನ್ನು ಬಿಡುಗಡೆ ಮಾಡಿದೆ. ಅದು ವೈರಲ್ ಆಗಿತ್ತು. ಅದನ್ನು ನೋಡಿ ಹಲವರು ನಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ವದಂತಿ ಹಬ್ಬಿಸಿದ್ದಾರೆ.

ಇದನ್ನು ನೋಡಿ ಟಾಲಿವುಡ್‌ನ ನನ್ನ ಸ್ನೇಹಿತರು ಕರೆ ಮಾಡಿ ತಿಳಿಸಿದರು. ನಂತರ ನಾನು ಅದನ್ನು ನೋಡಿದ್ದು, ಆಸ್ಚರ್ಯವಾಯಿತು ಎಂದು ಹೇಳಿದರು.

ನಾನೀಸ್​ ಗ್ಯಾಂಗ್ ಲೀಡರ್ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿಕೊಟ್ಟ ಪ್ರಿಯಾಂಕಾ, ಇತ್ತೀಚೆಗೆ ಬಿಡುಗಡೆಯಾದ 'ಸರಿಪೋದಾ ಸತ್ಯಭಾ' ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಅವರು ಪ್ರಿಯಾಂಕಾ ಅಭಿನಯದ ಕಾಲಿವುಡ್ ಚಿತ್ರ ಬ್ರದರ್‌ಗಾಗಿ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net