'ದಕ್ಷಿಣ ಭಾರತೀಯರು ಆಫ್ರಿಕಾದವರಂತೆ ಕಾಣ್ತಾರೆ': ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಣೀತಾ ತಿರುಗೇಟು

sam pitroda
Published on

ಬೆಂಗಳೂರು: ವಿವಾದಾತ್ಮಕ ಹೇಳಿಕೆಗಳಿಂದ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಪದೇ ಪದೆ ಸುದ್ದಿ ಆಗುತ್ತಿದ್ದು, ಇದೀಗ ದಕ್ಷಿಣ ಭಾರತೀಯರ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿ ಮತ್ತೆ ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ.

ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು. ಒಂದೇ ಸಾಲಿನಲ್ಲಿ ಸ್ಯಾಮ್ ಪಿತ್ರೋಡಾಗೆ ತಿರುಗೇಟು ನೀಡಿದ್ದಾರೆ. "ನಾನು ದಕ್ಷಿಣ ಭಾರತದವಳು. ನಾನು ಭಾರತೀಯಳಂತೆ ಕಾಣುತ್ತೇನೆ, ಸ್ಯಾಮ್ ಪಿತ್ರೋಡಾ" ಎಂದು ಎಕ್ಸ್​ ಖಾತೆಯಲ್ಲಿ ಬರೆದು ಫೋಟೊ ಶೇರ್ ಮಾಡಿದ್ದಾರೆ.

ಸ್ಯಾಮ್ ಪಿತ್ರೋಡಾ ಹೇಳಿಕೆ ಬಿಜೆಪಿಯವರಷ್ಟೇ ಅಲ್ಲದೆ ಹಲವರ ಆಕ್ರೋಷಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net