ಪವರ್‌ಲಿಫ್ಟಿಂಗ್‌ ಸ್ಪರ್ಧೆ; ಕಂಚಿನ ಪದಕ ಗೆದ್ದ ನಟಿ ಪ್ರಗತಿ

pragathi
Published on

ನವದೆಹಲಿ: ಬಹುಭಾಷಾ ನಟಿ ಪ್ರಗತಿ ಅವರು ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗಮನ ಸೆಳೆದಿದ್ದಾರೆ. ನಟನೆ ಜತೆಯೇ ವೇಟ್ ಲಿಫ್ಟಿಂಗ್ ಸಾಹಸಕ್ಕೆ ನಟಿ ಕೈ ಹಾಕಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿ 3ರನೇ ಸ್ಥಾನವನ್ನು ಪಡೆಯುವ ಮೂಲಕವಾಗಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ರಾಷ್ಟ್ರೀಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಗಳಲ್ಲಿ ಪ್ರಗತಿ ತನ್ನ ಶಕ್ತಿ ಪ್ರದರ್ಶಿಸಿದ್ದಾರೆ. ಹಿರಿಯ ನಟಿ ಬೆಂಗಳೂರಿನಲ್ಲಿ ನಡೆದ 28ನೇ ಪುರುಷ ಮತ್ತು ಮಹಿಳೆಯರ ರಾಷ್ಟ್ರೀಯ ಮಟ್ಟದ ‘ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್’ನಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದಾರೆ.

ಬೆಂಗಳೂರಿನ ಇಂಜಿನಿಯರ್ಸ್ ಅಸೋಸಿಯೇಶನ್ ಆಡಿಟೋರಿಯಂನಲ್ಲಿ ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಗಳ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪ್ರಗತಿ, ತಮ್ಮ ಪವರ್‌ಲಿಫ್ಟಿಂಗ್ ಪ್ರಯಾಣದ ಬಗ್ಗೆ ಭಾವುಕರಾದರು.

 'ನನ್ನ ಜೀವನದಲ್ಲಿ ಹಲವು ಏರಿಳಿತಗಳಿವೆ. ಕೆಟ್ಟ ನಿರ್ಧಾರಗಳು ಮತ್ತು ಹೃದಯ ವಿರಾಮಗಳೊಂದಿಗೆ ಜೀವನವು ಮುಗಿದಿದೆ ಎಂದು ನಾನು ಅನೇಕ ಬಾರಿ ಭಾವಿಸಿದೆ. ಆದರೆ ಅಂತಹ ವಿಷಯಗಳು ನನ್ನನ್ನು ಪ್ರಚೋದಿಸುತ್ತವೆ. ಹೊಸ ಜೀವನದ ಭರವಸೆಯನ್ನು ಹುಟ್ಟುಹಾಕುತ್ತದೆ. ಎಷ್ಟೇ ಕಷ್ಟಗಳು ಬಂದರೂ ಹೋರಾಡುವುದೇ ಬದುಕಿನ ಯಶಸ್ಸಿನ ಮಂತ್ರ ಎಂದು ಪ್ರಗತಿ  ಸೋಶಿಯಲ್​​ ಮೀಡಿಯಾದಲ್ಲಿ ಬರೆದುಕೊಂಡು ವಿಡಿಯೋವೊಂದನ್ನು ಶೇರ್​​ ಮಾಡಿದ್ದಾರೆ.

ಸದ್ಯ ನಟಿ ಪ್ರಗತಿ ತೆಲುಗು ಸಿನಿಮಾಗಳಲ್ಲಿ ತಾಯಿ, ಅಕ್ಕ ಮುಂತಾದ ವಿಶೇಷ ಪಾತ್ರ ಮಾಡುತ್ತಿದ್ದಾರೆ. ಈಗ ಅವರು ಟಾಲಿವುಡ್‌ನ ಬ್ಯುಸಿ ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಲ್ಲಿ ಒಬ್ಬರು. ತೆಲುಗು ಅಲ್ಲದೆ ಕನ್ನಡ ಮತ್ತು ತಮಿಳು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಸಿನಿಮಾಗಳ ಹೊರತಾಗಿ, ಸಾಮಾಜಿಕ ಮಾಧ್ಯಮದಲ್ಲಿ ಸಂಪೂರ್ಣವಾಗಿ ಸಕ್ರಿಯವಾಗಿರುವ ಪ್ರಗತಿ, ಅದರಲ್ಲಿ ತಮ್ಮ ಜಿಮ್ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಅವರು ಕಠಿಣ ತಾಲೀಮುಗಳು ಮತ್ತು ವೇಟ್‌ಲಿಫ್ಟಿಂಗ್ ವೀಡಿಯೊಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net