ನಾನಿನ್ನೂ ಜೀವಂತವಾಗಿದ್ದೇನೆ; ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಇರಲಿ ಜಾಗ್ರತೆ: ಪೂನಂ ಪಾಂಡೆ

Poonam Pandey
Published on

ಮುಂಬೈ: ಬಾಲಿವುಡ್​ ನಟಿ, ಮಾದಕ ಚೆಲುವೆ ಪೂನಂ ಪಾಂಡೆ ಸತ್ತಿಲ್ಲ ಬದುಕಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ರಿವೀಲ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ನಟಿ ಪೂನಂ ಪಾಂಡೆ ನಾನು ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾರೆ.

ನಿಮ್ಮೆಲ್ಲರೊಂದಿಗೆ ಮಹತ್ವದ ವಿಷಯವನ್ನು ಹಂಚಿಕೊಳ್ಳಲು ಬಯಸಿದ್ದು, ನಾನು ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್​ನಿಂದ ನಾನು ಬಳಲುತ್ತಿಲ್ಲ. ಆದರೆ, ದುರಂತವೆಂದರೆ ಈ ರೋಗವನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಜ್ಞಾನದ ಕೊರತೆಯಿಂದ ಸಾವಿರಾರು ಮಹಿಳೆಯರ ಜೀವವನ್ನು ಈ ರೋಗ ಬಲಿ ಪಡೆದುಕೊಂಡಿದೆ.

ಇತರ ಕೆಲವು ಕ್ಯಾನ್ಸರ್‌ಗಳಿಗಿಂತ ಭಿನ್ನವಾಗಿ, ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಲ್ಲದು. HPV ಲಸಿಕೆ ಮತ್ತು ಆರಂಭಿಕ ಪತ್ತೆ ಪರೀಕ್ಷೆಗಳು ಪ್ರಮುಖವಾಗಿದ್ದು, ಈ ಕಾಯಿಲೆಯಿಂದ ಯಾರೂ ತಮ್ಮ ಪ್ರಾಣ ಕಳೆದುಕೊಳ್ಳದಂತೆ ನೋಡಿಕೊಳ್ಳಲು ನಾವು ಎಚ್ಚರದಿಂದಿರಬೇಕು. ವಿಮರ್ಶಾತ್ಮಕ ಅರಿವಿನೊಂದಿಗೆ ಒಬ್ಬರಿಗೊಬ್ಬರು ಜಾಗೃತಿ ಮೂಡಿಸೋಣ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಹಿಳೆಯರಿಗೆ ತಿಳಿಸೋಣ ಏನು ಮಾಡಬಹುದೆಂಬುದನ್ನು ಒಟ್ಟಾಗಿ, ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಶ್ರಮಿಸೋಣ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net