ಪೂನಂ ಪಾಂಡೆ ಸಾವಿನ ಬೆನ್ನಲ್ಲೇ ನಟಿಯ ಹಳೆಯ ಹೇಳಿಕೆ ವೈರಲ್

poonam
Published on

ಮುಂಬೈ: ಪೂನಂ ಪಾಂಡೆ ಖ್ಯಾತ ಮಾಡೆಲ್ ಹಾಗೂ ನಟಿ. ಪೂನಂ ಸಾವಿನ ಸುದ್ದಿ ಮನರಂಜನಾ ಲೋಕದಲ್ಲಿ ಸಂಚಲನ ಮೂಡಿಸಿದೆ. ಶುಕ್ರವಾರ ದಿನವಿಡೀ ಈ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಕೊನೆಗೆ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಅವರ ಸಾವನ್ನು ಖಚಿತಪಡಿಸಲಾಯಿತು. ಲಾಕ್ ಅಪ್ ಶೋ ಮೂಲಕ ಮನೆ ಮನಗಳಲ್ಲಿ ಫೇಮಸ್ ಆಗಿದ್ದರು ಪೂನಂ ಪಾಂಡೆ. ಸದ್ಯ ಈ ಶೋನ ಹಳೆಯ ಹೇಳಿಕೆ ವೈರಲ್ ಆಗುತ್ತಿದೆ.

ಪೂನಂ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಪೋಸ್ಟ್ ಹೊರಬಂದಿದ್ದು, ಇದು ಅವರ ಪ್ರತಿಯೊಬ್ಬ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಈ ಮಧ್ಯೆ ಕಂಗನಾ ಅವರ 'ಲಾಕ್ ಅಪ್' ಶೋನಲ್ಲಿ ಪೂನಂ ಕೊಟ್ಟ ಹೇಳಿಕೆ ವೈರಲ್ ಆಗುತ್ತಿದೆ.

ಪೂನಂ ಪಾಂಡೆ ಸಾವಿನ ಸುದ್ದಿ ಆಕೆಯ ಮ್ಯಾನೇಜರ್‌ ಖಚಿತಪಡಿಸಿದ್ದಾರೆ. ಇದಾದ ನಂತರ ಈ ಸುದ್ದಿ ಕಾಳ್ಗಿಚ್ಚಿನಂತೆ ಮನರಂಜನಾ ಕಾರಿಡಾರ್‌ಗಳಲ್ಲಿ ಹಬ್ಬಿತ್ತು. ಪೂನಂ ಸಾವಿನ ಬಗ್ಗೆ ಆಕೆಯ ಸೆಲೆಬ್ರಿಟಿ ಸ್ನೇಹಿತರು ಸಹ ಹೇಳಿಕೆ ನೀಡಿದ್ದಾರೆ. ಏತನ್ಮಧ್ಯೆ, ' ಲಾಕ್ ಅಪ್ ' ಕಾರ್ಯಕ್ರಮದ ಅವರ ಹೇಳಿಕೆಯೊಂದು ವೈರಲ್ ಆಗುತ್ತಿದೆ, ಅಲ್ಲಿ ಅವರು ತಮ್ಮ ದುಃಖವನ್ನು ತೋಡಿಕೊಂಡಿದ್ದು, ಮಹಿಳೆಯರಿಂದ ಎಷ್ಟು ಟ್ರೋಲ್ ಆಗಿದ್ದಾರೆಂದು ಹೇಳಿದ್ದಾರೆ.

ಪೂನಂ ಪಾಂಡೆ 2022 ರಲ್ಲಿ 'ಲಾಕ್​​​​ ಅಪ್' ಶೋನಲ್ಲಿ ಭಾಗವಹಿಸಿದ್ದರು. ಒಂದು ಸಂಚಿಕೆಯಲ್ಲಿ ಸಹ -ಸ್ಪರ್ಧಿ ಸಾರಾ ಖಾನ್‌ಗೆ ಅವರು ತಾನು 'ಭಾರತೀಯ' ರೀತಿಯ ಮಹಿಳೆ ಅಲ್ಲ ಎಂದು ಹೇಗೆ ನಿರ್ಣಯಿಸಲಾಯಿತು ಎಂಬುದನ್ನು ಬಹಿರಂಗಪಡಿಸಿದರು. ಪೂನಂ, “ನನ್ನನ್ನು ಹೆಚ್ಚಾಗಿ ಮಹಿಳೆಯರು ನಿರ್ಣಯಿಸುತ್ತಾರೆ, ಪುರುಷರಲ್ಲ. ಇದಕ್ಕೆಲ್ಲ ಕಾರಣ ನಾನು ಭಾರತೀಯ ಮಹಿಳೆ ಅಲ್ಲ. ನಾನು ಭಾರತೀಯ ಸಂಸ್ಕೃತಿಯಂತೆ ಕೆಲಸ ಮಾಡುವುದಿಲ್ಲ. ನನ್ನನ್ನು ಅನ್ಯಲೋಕದವರಂತೆ ನಡೆಸಿಕೊಳ್ಳುತ್ತಾರೆ. ಪೂನಂ ಪಾಂಡೆ ಅಂತ ಹೆಸರು ಕೇಳಿದ ಮೇಲೆ ಜನ ವಿಚಿತ್ರವಾಗಿ ಪ್ರತಿಕ್ರಿಯಿಸುತ್ತಾರೆ. ಇದನ್ನೆಲ್ಲಾ ಕೇಳಿದ ನಂತರ ನನಗೆ ಬೇಸರವಾಗಿದೆ. ತಾನು ಯಾರ ಹೆಂಡತಿ ಅಥವಾ ಸೊಸೆ ಅಲ್ಲ, ಆದರೆ ಖಂಡಿತವಾಗಿಯೂ ತಾನು ಯಾರ ಮಗಳು" ಎಂಬುದನ್ನು ನಟಿ ಹೇಳಿದರು. ಈ ಹಿಂದೆ ತಾನು ಅನೇಕ ಕೆಲಸಗಳನ್ನು ಮಾಡಿದ್ದು, ಅದಕ್ಕಾಗಿ ಅವರು ಸಂಪೂರ್ಣವಾಗಿ ತಿರಸ್ಕರಿಸಲ್ಪಟ್ಟಿದ್ದಾರಂತೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net