ಖ್ಯಾತ ಬಾಲಿವುಡ್‌ ನಟಿ ನೂರ್‌ ಮಾಳವಿಕಾ ದಾಸ್‌ ಆತ್ಮಹತ್ಯೆಗೆ ಶರಣು

Noor Malabika Da
Published on

ಮುಂಬೈ:  ದಿ ಟ್ರಯಲ್‌ (The Trial) ವೆಬ್‌ ಸಿರೀಸ್‌ ಖ್ಯಾತಿ ನಟಿ ನೂರ್‌ ಮಾಳವಿಕಾ ದಾಸ್‌ ಅವರು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಅಂಧೇರಿಯ ಓಶ್ವಿವಾರ ಪ್ರದೇಶದಲ್ಲಿರುವ ಫ್ಲ್ಯಾಟ್‌ನಲ್ಲಿ ನಟಿಯು ವಾಸವಿದ್ದರು. ಅಸ್ಸಾಂ ಮೂಲದವರಾದ ನೂರ್‌ ಮಾಳವಿಕಾ ದಾಸ್‌ ಅವರು ನಟನೆಗೆ ಕಾಲಿಡುವ ಮೊದಲು ಕತಾರ್‌ ಏರ್‌ವೇಸ್‌ನಲ್ಲಿ ಗಗನಸಖಿಯಾಗಿದ್ದರು.

ಲೋಖಂಡ್‌ವಾಲಾದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ 32 ವರ್ಷದ ಬಾಲಿವುಡ್‌ ನಟಿಯು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್‌ 6ರಂದೇ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರಿಗೂ ಗೊತ್ತಾಗಿಲ್ಲ. ಮನೆಯಲ್ಲಿ ಯಾರೂ ಇರಲಿಲ್ಲ ಹಾಗೂ ಅಕ್ಕಪಕ್ಕದ ಮನೆಯವರಿಗೂ ವಿಷಯ ಗೊತ್ತಾಗಿಲ್ಲ. ಕೆಲ ದಿನಗಳ ಬಳಿಕ ಅಪಾರ್ಟ್‌ಮೆಂಟ್‌ನಲ್ಲಿ ದುರ್ವಾಸನೆ ಕಂಡುಬಂದಿದ್ದು, ಕೂಡಲೇ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಫ್ಲ್ಯಾಟ್‌ ಬಾಗಿಲು ತೆಗೆದಾಗ ನಟಿಯ ಶವವು ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.

ನೂರ್‌ ಮಾಳವಿಕಾ ದಾಸ್‌ ಅವರು ಹಿಂದಿ ಸಿನಿಮಾಗಳು ಹಾಗೂ ವೆಬ್‌ಸಿರೀಸ್‌ಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಸಿಸ್ಕಿಯಾನ್‌, ವಾಕ್‌ಮನ್‌, ತೀತ್ರಿ ಚಟ್ನಿ, ಜಜ್ಞ ಉಪಾಯ್‌, ಚಾರ್‌ಮಸುಖ್‌, ದೇಖ್‌ ಅನ್‌ದೇಖಿ, ಬ್ಯಾಕ್‌ರೋಡ್‌ ಹಲ್‌ಚಲ್‌ ಸೇರಿ ಹಲವು ಸಿನಿಮಾ, ಸಿರೀಸ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net