

ನವದೆಹಲಿ: ( nikitha nayyar passes away ) ದಕ್ಷಿಣ ಭಾರತದ ಚಿತ್ರರಂಗದ ಬಾಲನಟಿ ನಿಕಿತಾ ನಯ್ಯರ್ (21) ಕಾಯಿಲೆಯಿಂದ ನಿಧನರಾಗಿದ್ದಾರೆ.
ನಟಿ ನಿಕಿತಾ ನಯ್ಯರ್ (21) ಎರಡು ಬಾರಿ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿದ್ದರೂ ಗುಣಮುಖರಾಗದೆ ಕೊನೆಯುಸಿರೆಳೆದಿದ್ದಾರೆ.
ಬಿ.ಎಸ್ಸಿ ಸೈಕಾಲಜಿ ವಿದ್ಯಾರ್ಥಿನಿಯಾಗಿದ್ದ ನಿಕಿತಾ ನಯ್ಯಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕೊಲ್ಲಂ ಕರುನಾಗಪಳ್ಳಿ ಮೂಲದ ನಿಕಿತಾ, ಶಾಫಿ ನಿರ್ದೇಶನದ ಮೇರಿಕುಂಡೊರು ಕುಂಞಾಡು ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು.
ವಿಲ್ಸನ್ಸ್ ಡಿಸೀಸ್ ನಿಂದ ಬಳಲುತ್ತಿದ್ದ ಅವರಿಗೆ ಎರಡು ಬಾರಿ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಎರಡನೇ ಶಸ್ತ್ರಚಿಕಿತ್ಸೆಯಾದ ವಾರದಲ್ಲೇ ಅವರು ಕೊನೆಯುಸಿರೆಳೆದರು.
ನಿಕಿತಾ ನಯ್ಯರ್ ಅವರ ಮೃತ ದೇಹವನ್ನು ಇಡಪಳ್ಳಿ ನೇತಾಜಿ ನಗರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನ ನಡೆಯಲಿದೆ. ಬಳಿಕ ಕೊಚ್ಚಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.