ಆಂಧ್ರಪ್ರದೇಶದ ಸರ್ಕಾರಿ ಕಾರಿನಲ್ಲಿ ನಟಿ ನಿಧಿ ಅಗರ್ವಾಲ್​ ಪ್ರಯಾಣ! ಡಿಸಿಎಂ ವಿರುದ್ಧ ಸಿಡಿದೆದ್ದ ನೆಟ್ಟಿಗರು..|Nidhhi Agerwal

untitled-design-74-6899c0392b616
Published on

Nidhhi Agerwal : ಪವನ್​ ಕಲ್ಯಾಣ್​ ಅಭಿನಯದ ಹರಿ ಹರ ವೀರ ಮಲ್ಲು ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಾಯಕಿ ನಿಧಿ ಅಗರ್ವಾಲ್​ ವಿಜಯವಾಡದಲ್ಲಿ ಆಂಧ್ರಪ್ರದೇಶದ ಸರ್ಕಾರಿ ಕಾರಿನಲ್ಲಿ ಇತ್ತಿಚೆಗೆ ಪ್ರಯಾಣಿಸುತ್ತಿರುವ ವಿಡಿಯೋ ಎಲ್ಲೆಡೆ ಚರ್ಚೆಯಾಗಿದೆ.

ವಿಡಿಯೋದಲ್ಲಿ ಕಾರಿನ ನಂಬರ್​ ಪ್ಲೇಟ್​ನಲ್ಲಿ ಆನ್ ಗವರ್ನಮೆಂಟ್ ಡ್ಯೂಟಿ' ಎಂದು ಬರೆಯಲಾಗಿದೆ. ವರದಿಯ ಪ್ರಕಾರ, ನಟಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಾಲ್​ಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.

ಇನ್ನು ನಿಧಿಗೆ ಪ್ರಯಾಣಿಸಲು ಸರ್ಕಾರಿ ವಾಹನ ಹೇಗೆ ಸಿಕ್ಕಿತು ಎಂದು ನೆಟಿಜನ್​ಗಳು ಆಶ್ಚರ್ಯವಾಗಿದ್ದರೆ, ಇನ್ನೂ ಕೆಲವರು ಪವನ್​ ಕಲ್ಯಾಣ್​ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂಷಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ

ಸರ್ಕಾರವು ಸಿನಿಮಾ ನಟರಿಗೆ ಓಡಾಡಲು ಸರ್ಕಾರಿ ವಾಹನ ನೀಡುತ್ತದೆಯೇ? ಎಂದು ಓರ್ವ X ಬಳಕೆದಾರ ಪ್ರತಿಕ್ರಿಸಿದ್ದಾನೆ. ಇನ್ನೊಬ್ಬ X ಬಳಕೆದಾರ @PawanKalyan ಡಿಸಿಎಂ ನಿಮ್ಮಂತೆ ಪವರ್​ ಬಳಸುವುದು ಬೇರೆ ಯಾರಿಗೂ ತಿಳಿದಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನು ಜನರು ನಿಮಗೆ ಅಧಿಕಾರ ಕೊಟ್ಟಿದ್ದು ಅವರಿಗೆ ಒಳ್ಳೆಯದನ್ನು ಮಾಡಲು @PawanKalyan ನಿಮ್ಮೊಂದಿಗೆ ನಟಿಸಿದ ನಾಯಕಿಯರಿಗೆ ಸರ್ಕಾರಿ ವಾಹನಗಳನ್ನು ಒದಗಿಸಲು ಅಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

ಈ ಬಗ್ಗೆ ಚರ್ಚೆ ಭಾರಿಯಾಗಿದ್ದರೂ, ನಟಿ ನಿಧಿ ಸರ್ಕಾರಿ ವಾಹನದಲ್ಲಿ ಪ್ರಯಾಣಿಸುವ ಬಗ್ಗೆ ಯಾವುದೇ ಹೇಳಿಕೆಯನ್ನು ಹಂಚಿಕೊಂಡಿಲ್ಲ.( ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net