

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಸರಣಿಯ ಸಕ್ಸಸ್ ಬಳಿಕ ಕಾಲಿವುಡ್ ನಟ ಜಯಂ ರವಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊಹೊಮ್ಮಿದ್ದಾರೆ. ಸದ್ಯ ಅವರು ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೆಸರು ‘ಇರೈವನ್’.
ಇಲ್ಲಿ ಜಯಂ ರವಿಗೆ ಲೇಡಿ ಸೂಪರ್‌ಸ್ಟಾರ್ ನಯನ ತಾರಾ ಜೋಡಿಯಾಗಿದ್ದಾರೆ. ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಐ.ಅಹಮದ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಚೆನ್ನೈ ಹಾಗೂ ಪುದಚೆರಿಯಲ್ಲಿ ನಡೆಸಲಾಗಿದೆ.
ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಕೆಲವು ದಿನಗಳಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಇತ್ತೀಚೆಗಷ್ಟೆ ಚಿತ್ರದ ರಿಲೀಸ್ ದಿನಾಂಕ ಕೂಡ ಘೋಷಣೆಯಾಗಿದ್ದು, ‘ಇರೈವನ್’ ಆಗಸ್ಟ್ 25ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಜಯಂ ರವಿ, ನಯನತಾರಾ ಜತೆ ರಾಹುಲ್ ಬೋಸ್, ಆಶಿಶ್ ವಿದ್ಯಾರ್ಥಿ, ನರೇನ್, ವಿಜಯಲಕ್ಷ್ಮೀ, ಚಾರ್ಲಿ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ, ಮಣಿಕಂದನ್ ಬಾಲಾಜಿ ಸಂಕಲನವಿರಲಿದೆ. (ಏಜೆನ್ಸೀಸ್)