

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಮೇಘನಾ ಗಾಂವ್ಕರ್ ಸದ್ಯ ವಿದೇಶ ಪ್ರವಾಸದಲ್ಲಿದ್ದು ಎಂಜಾಯ್ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಅಲ್ಲಿ ನವರಸ ನಾಯಕ ಜಗ್ಗೇಶ್ ಅವರನ್ನೂ ನೆನಪಿಸಿಕೊಂಡಿದ್ದಾರೆ. ಆ ಬಗ್ಗೆ ಅವರೇ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ ಕೂಡ.
ಅಮೆರಿಕ ಪ್ರವಾಸದಲ್ಲಿರುವ ಮೇಘನಾ, ಭಾನುವಾರ ಅಲ್ಲಿನ ವಾಷಿಂಗ್ಟನ್ ಡಿಸಿ ಬಳಿಯ ಫ್ರೆಡ್ರಿಕ್ ಸಿಟಿಯಲ್ಲಿನ ದೇವಸ್ಥಾನವೊಂದಕ್ಕೆ ತೆರಳಿದ್ದಾರೆ. ಅಲ್ಲಿನ ದೇವರನ್ನು ನೋಡುತ್ತಿದ್ದಂತೆ ಅವರಿಗೆ ನಟ ಜಗ್ಗೇಶ್ ಅವರ ನೆನಪಾಗಿದೆ. ಅದಕ್ಕೆ ಕಾರಣ, ರಾಯರು.
ಶ್ರೀಗುರು ರಾಘವೇಂದ್ರರ ಪರಮಭಕ್ತರಾಗಿರುವ ನಟ ಜಗ್ಗೇಶ್ ಆಗಾಗ್ಯೆ ಮಂತ್ರಾಲಯಕ್ಕೆ ಹೋಗಿ ಬರುತ್ತಿರುತ್ತಾರೆ. ಮಾತ್ರವಲ್ಲ, ಆಗಾಗ ರಾಯರನ್ನು ಸ್ಮರಿಸಿಕೊಂಡು ತಮ್ಮ ಭಕ್ತಿ-ಭಾವದ ಅನುಭವಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ ಸುಮಾರು ಒಂದು ವರ್ಷದ ಹಿಂದೆ ಬಿಡುಗಡೆಯಾದ ಕವಿರಾಜ್ ನಿರ್ದೇಶನ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾದಲ್ಲಿ ಮೇಘನಾ-ಜಗ್ಗೇಶ್ ಜತೆಯಾಗಿ ಅಭಿನಯಿಸಿದ್ದರು. ಹೀಗಾಗಿ ಅಮೆರಿಕದಲ್ಲಿ ರಾಯರನ್ನು ನೋಡಿದಾಕ್ಷಣ ಮೇಘನಾ ಅವರಿಗೆ ಜಗ್ಗೇಶ್ ಅವರ ನೆನಪಾಗಿದೆ.