ಅಫೇರ್..ಎರಡನೇ ಮದುವೆ ಬಗ್ಗೆ 'ಮೈ ಆಟೋಗ್ರಾಫ್' ನಟಿ ಮೀನಾ ಕಣ್ಣೀರಿಟ್ಟು ಸ್ಪಷ್ಟನೆ!

meena
Published on

ನವದೆಹಲಿ: ಚಿತ್ರರಂಗದ ಸೆಲೆಬ್ರಿಟಿಗಳ ಪರಿಸ್ಥಿತಿ ಲೆಕ್ಕಿಸದೆ ಅವರ ಸದ್ಯದ ಪರಿಸ್ಥಿತಿ ಏನೆಂದು ತಿಳಿಯದೆ ಒಂದಷ್ಟು ಸುದ್ದಿಗಳು ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೇಗನೇ ಹುಟ್ಟಿಕೊಳ್ಳುತ್ತವೆ. ಆ ಸುದ್ದಿಗಾಗಿ ಸೆಲೆಬ್ರಿಟಿಗಳನ್ನು ಮುಜುಗರಕ್ಕೀಡು ಮಾಡುತ್ತಲೇ ಇರುತ್ತಾರೆ. ಆದರೆ ಇದೀಗ ಇಂತಹದ್ದೆ ವಿಚಾರವಾಗಿ  ಮನನೊಂದ ನಟಿ ಮೀನಾ ಮಾತನಾಡಿದ್ದಾರೆ.

Actress Meena
ನಟಿ ಮೀನಾ

ನಟಿ ಮೀನಾ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ಪತಿ ವಿದ್ಯಾಸಾಗರ್ ಹಾಗೂ ಮೀನಾ ನಡುವೆ ಜಗಳವಾಗಿದೆ. ಎರಡನೇ ಮದುವೆ ಆಗುತ್ತಿದ್ದಾರೆ ಇಂತಹದ್ದೇ ಒಂದಿಷ್ಟು ಸಂಗತಿಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

ಈಗಷ್ಟೇ ನಾನು ಆ ನೋವಿನಿಂದ ಹೊರಬರುತ್ತಿದ್ದೇನೆ:

ಮೀನಾ ಹಾಗೂ ಪತಿ ವಿದ್ಯಾಸಾಗರ್ ನಡುವೆ ಜಗಳ ನಡೆದಿತ್ತು ಎಂಬ ಮಾತುಗಳು ಕೇಳಿ ಬಂದಿದ್ದು, ಈ ಬಗ್ಗೆ ಅವರ ಪೋಷಕರು ಕರೆ ಮಾಡಿ ಇಬ್ಬರಿಗೂ ಪ್ರಶ್ನೆ ಮಾಡಿದ್ದನ್ನು ನೆನೆಪಿಸಿಕೊಂಡಿದ್ದಾರೆ.  ವಿದ್ಯಾಸಾಗರ್‌ಗೆ ಶ್ವಾಸಕೋಶದ ಕಸಿ ಮಾಡಿಸಬೇಕಿತ್ತು. ಅದಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿದ್ದವು. ವಿದೇಶಕ್ಕೆ ಕರೆದುಕೊಂಡು ಹೋಗಲು ಯೋಚಿಸಿದ್ದೆವು. ಆದರೆ, ನಾನು ಅಲ್ಲಿಗೆ ಹೋದರೂ ಕೆಲವು ಸಮಯ ಕಾಯಲೇಬೇಕಿತ್ತು. ಅಷ್ಟರಲ್ಲೇ ಊಹಿಸಿಕೊಳ್ಳುವುದಕ್ಕೆ ಅಸಾಧ್ಯವಾದದ್ದು ನಡೆದು ಹೋಯ್ತು. ಈಗಷ್ಟೇ ನಾನು ಆ ನೋವಿನಿಂದ ಹೊರಬರುತ್ತಿದ್ದೇನೆ. ನಿಜವಾಗಿಯೂ ನಮ್ಮ ನಡುವೆ ಜಗಳ ನಡೆದಿರಲಿಲ್ಲ. ನಾವು ತುಂಬಾನೇ ಸಂತೋಷವಾಗಿದ್ದೇವು ಎಂದು  ಹೇಳಿದ್ದಾರೆ.

ಪತಿ ವಿದ್ಯಾಸಾಗರ್ ನಿಧನದ ಬಳಿಕ ನಾನು ಎರಡನೇ ಮದುವೆಯಾಗುತ್ತೇನೆ ಎಂದು ಸುದ್ದಿ ಹಬ್ಬಿತ್ತು. ನಾನು ಹೀರೋ ಧನುಷ್ ಅವರನ್ನು ಮದುವೆಯಾಗುತ್ತೇನೆ ಎಂದು ಪ್ರಚಾರ ಮಾಡಿದ್ದರು. ರಾಜಕಾರಣಿ, ಹಿರಿಯ ಸ್ಟಾರ್ ನಟ, ಉದ್ಯಮಿ ಹೀಗೆ ನನ್ನ ಮದುವೆ ಬಗ್ಗೆ ಬರೆದಿದ್ದಾರೆ. ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂತೆಲ್ಲ ಬರೆದಿದ್ದರು. ಅದು ನಿಜವೋ ಸುಳ್ಳೋ ಅನ್ನೋದನ್ನು ತಿಳಿದುಕೊಳ್ಳದೆ ಬರೆಯೋದು ಸರಿಯಿಲ್ಲ. ಇಂತಹ ಸುದ್ದಿಗಳಿಂದ ನನ್ನ ಕುಟುಂಬಕ್ಕೆ ತೊಂದರೆಯಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೀನಾ ಅವರು 1976 ಸೆಪ್ಟೆಂಬರ್ 16 ರಂದು ಚೆನ್ನೈನಲ್ಲಿ ಜನಿಸಿದರು. ತಂದೆ ತಮಿಳಿನ ದುರೈ ರಾಜ್ ಆದರೆ, ತಾಯಿ ಮಲಯಾಳಂ ಮೂಲದ ರಾಜಮಲ್ಲಿಕಾ. ಬಾಲಕಿಯಾಗಿದ್ದಾಗಲೇ ನಟನೆಗೆ ಇಳಿದ ಮೀನಾ, ತಮಿಳು, ತೆಲುಗು ಮಲಯಾಳಂ, ಕನ್ನಡ, ತೆಲಗು ಮತ್ತು ಹಿಂದಿ ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಮೀನಾ ಭರತನಾಟ್ಯ ಕಲಾವಿದೆ ಕೂಡ. ನಟಿ ಮೀನಾ ಕನ್ನಡದಲ್ಲಿ ರವಿಚಂದ್ರನ್ ಅಭಿನಯದ ಪುಟ್ನಂಜ, ಸುದೀಪ್ ಅಭಿನಯದ ಸ್ವಾತಿ ಮುತ್ತು, ಮೈ ಆಟೋಗ್ರಾಫ್, ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿಯ ಸಿಂಹ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.   ಟಿವಿ ರಿಯಾಲಿಟಿ ಶೋನಲ್ಲಿಯೂ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net