

ಹೈದರಾಬಾದ್: ಚಾರಿಟೆಬಲ್ ಟ್ರಸ್ಟ್ವೊಂದರ ವತಿಯಿಂದ ತೆಲುಗಿನ ನಟಿ ಮಾಳವಿಕಾ ಶರ್ಮಾ ಅವರು ಸರ್ಕಾರಿ ಶಾಲೆಯ ಅನೇಕ ಬಡ ಮಕ್ಕಳಿಗೆ ಚಪ್ಪಲಿ ನೀಡಿದ್ದಲ್ಲದೆ, ಸ್ವತಃ ಹೋಗಿ ಮಕ್ಕಳ ಕಾಲಿಗೆ ತಾವೇ ಚಪ್ಪಲಿ ಧರಿಸಲು ಸಹಾಯ ಮಾಡಿರುವ ವಿಡಿಯೋ ವೈರಲ್ ಆಗಿದೆ.
ದೇವ್ ಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾಳವಿಕಾ ಶರ್ಮಾ ಅವರು ಸರ್ಕಾರಿ ಶಾಲೆಯ ಅನೇಕ ಬಡ ಮಕ್ಕಳಿಗೆ ಚಪ್ಪಲಿಯನ್ನು ಚಪ್ಪಲಿ ನೀಡಿದ್ದಲ್ಲದೆ, ಸ್ವತಃ ತಾವೇ ಚಪ್ಪಲಿ ಧರಿಸಿ ಅಚ್ಚರಿ ಮೂಡಿಸಿದ್ದಾರೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ನಟಿ, ದೇವ್ ಶ್ರೀ ಚಾರಿಟಬಲ್ ಟ್ರಸ್ಟ್ ಸುಮಾರು 40 ಶಾಲೆಗಳ (10000-15000) ವಿದ್ಯಾರ್ಥಿಗಳನ್ನು ಹೊಂದಿದೆ. ನಾನು ಇತ್ತೀಚೆಗೆ ತಂಗಿದ್ದ ದೇವ್ ಶ್ರೀ ದೇವಗಢ್ ಬೊಟಿಕ್ ಹೋಮ್ ಸ್ಟೇ ಮಾಲೀಕ ಶತ್ರುಂಜಯ್ ಸಿಂಗ್ ಚುಂದಾವತ್ ಅವರು ಸ್ಥಳೀಯ ಶಾಲೆಗಳೊಂದಿಗೆ ಸೇವಾ ಕಾರ್ಯಕ್ರಮಗಳನ್ನು ಆರಂಭಿಸಿದ್ದಾರೆ. ಅವರು ಮತ್ತು ಅವರ ಕುಟುಂಬ ಶಾಲೆಗಳಿಗೆ ಬೆಂಬಲ ನೀಡುತ್ತದೆ. ಇಂದು ನನ್ನ ಪಾಲಿನ ಸಹಾಯ ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ಬಟ್ಟೆ, ಶಾಲಾ ಸೌಲಭ್ಯಗಳು ಮತ್ತು ಅವರ ಮೂಲಭೂತ ಅಗತ್ಯಗಳಿಗೆ ಸಹಾಯ ಮಾಡಲು, ನೀವು ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿರುವ ಸಂಖ್ಯೆಯ ಮೂಲಕ ಅವರನ್ನು ಸಂಪರ್ಕಿಸಬಹುದು ಎಂದು ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಹೀರೋಯಿನ್, ಲಾಯರ್ ಆಗಿದ್ದರೂ ಮಕ್ಕಳ ಪಾದರಕ್ಷೆಯನ್ನು ತಾವೇ ತೆಗೆಸುವುದು ಇಷ್ಟವಾಯ್ತು ಎಂದು ಅಭಿಮಾನಿಗಳು ಮತ್ತು ನೆಟಿಜನ್‌ಗಳು ನಟಿಯ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಮಾಳವಿಕಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಪ್ರಸ್ತುತ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.