

ಬೆಂಗಳೂರು: ಒಂದು ಕಾಲದಲ್ಲಿ ಸ್ಟಾರ್ ಹೀರೋಗಳಿಗೆ ಸರಿಸಮಾನವಾಗಿ ಸಂಭಾವನೆ ಪಡೆದ ಕೆಲವೇ ಕೆಲವು ನಟಿಯರಲ್ಲಿ ಮಾಧವಿ ಕೂಡ ಒಬ್ಬರು. ತೆಲುಗು ಹುಡುಗಿ ಮಾಧವಿ... ಸ್ಯಾಂಡಲ್ವುಡ್, ಬಾಲಿವುಡ್ , ಮಾಲಿವುಡ್ ತನಕ ಮಾತ್ರ ತನ್ನ ಹವಾ ಮುಂದುವರೆಸಿದರು. ಇದೀಗ ಮದುವೆಯಾಗಿ ಸಿನಿಮಾದಿಂದ ದೂರವಾದ ನಂತರ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾರೆ. ಇದೀಗ ನಟಿ ಮಕ್ಕಳ ಜತೆ ಇರುವ ಫೋಟೋಗಳು ವೈರಲ್ ಆಗಿವೆ.
ಆಂಧ್ರಪ್ರದೇಶದ ಏಲೂರಿನಲ್ಲಿ ಶಶಿರೇಖಾ ಮತ್ತು ಗೋವಿಂದಸ್ವಾಮಿ ದಂಪತಿಗೆ ಜನಿಸಿದರು. ಈಕೆಯ ನಿಜವಾದ ಹೆಸರು ಕನಕ ವಿಜಯ ಲಕ್ಷ್ಮಿ. ಅವರು ಬಾಲ್ಯದಿಂದಲೂ ಭರತನಾಟ್ಯದಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಅವರ ತಾಯಿಯಿಂದ ಅದರಲ್ಲಿ ತರಬೇತಿ ಪಡೆದರು. ನಂತರ ಅವರ ಕುಟುಂಬ ಹೈದರಾಬಾದ್‌ಗೆ ಸ್ಥಳಾಂತರಗೊಂಡಿತು . ಅವರು ಹೈದರಾಬಾದ್‌ನ ಅಬಿಡ್ಸ್‌ನ ಸ್ಟಾನ್ಲಿ ಗರ್ಲ್ಸ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ರವೀಂದ್ರಭಾರತಿಯಲ್ಲಿ ಅವರ ರಂಗಪ್ರವೇಶವನ್ನು ನೋಡಿದ ದಾಸರಿ ನಾರಾಯಣ ರಾವ್ ಅವರಿಗೆ ತಮ್ಮ ‘ತುರ್ಪು ಪದಮರ’ ಚಿತ್ರದಲ್ಲಿ ಮೊದಲ ಅವಕಾಶ ನೀಡಿದರು. 13ನೇ ವಯಸ್ಸಿಗೆ ನಾಯಕಿಯಾದಳು.
ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾಳೆ. ಆಗ ಆಕೆಗೆ ಪ್ರತ್ಯೇಕ ಅಭಿಮಾನಿ ಬಳಗವಿತ್ತು. ಆಕೆಯ ವೃತ್ತಿಜೀವನವು ಉತ್ತುಂಗದಲ್ಲಿರುವಾಗ, ಅವರು ಉದ್ಯಮಿ ರಾಲ್ಫ್ ಶರ್ಮಾ ಅವರನ್ನು 1996 ರಲ್ಲಿ ವಿವಾಹವಾದರು ಮತ್ತು ತಮ್ಮ ಪತಿಯೊಂದಿಗೆ ನ್ಯೂಜೆರ್ಸಿಯಲ್ಲಿ ನೆಲೆಸಿದರು. ಮದುವೆಯ ನಂತರ ನಟಿಸಲಿಲ್ಲ. ಪ್ರಸ್ತುತ ಅವರು ವ್ಯಾಪಾರ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಆಗ ಹೀರೋಯಿನ್ ಆಗಿ ನಟಿಸಿದ್ದ ಈಕೆ ಈಗ ಹೇಗಿದ್ದಾಳೆ ಎಂಬ ಕುತೂಹಲ ಅನೇಕರಲ್ಲಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿರುವ ಈ ಸ್ಟಾರ್ ನಟಿ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾಧವಿಗೆ ಮುತ್ತಿನಂತಹ ಮೂವರು ಹೆಣ್ಣು ಮಕ್ಕಳಿದ್ದರು. ಈ ಮೂವರೂ ಕೂಡ ತಮ್ಮ ತಾಯಿಯನ್ನು ಮೀರಿಸುವ ಸೌಂದರ್ಯ ಹೊಂದಿದ್ದಾರೆ.
ಹಿರಿಯ ಮಗಳ ಹೆಸರು ಟಿಫಾನಿ, ಎರಡನೇ ಮಗಳು ಪ್ರಿಸ್ಸಿಲ್ಲಾ ಮತ್ತು ಮೂರನೇ ಮಗಳು ಇವಾಲಿನ್. ಈ ಮೂವರು ಈಗ ಹದಿಹರೆಯದವರು. ಮಾಧವಿ ಮಕ್ಕಳನ್ನು ಭರತನಾಟ್ಯದಲ್ಲಿ ಪ್ರವೀಣರನ್ನಾಗಿಸಿದರು. ಪ್ರಸ್ತುತ ಹೆಣ್ಣು ಮಕ್ಕಳು ಓದುವುದರೊಂದಿಗೆ ವ್ಯಾಪಾರ ಕ್ಷೇತ್ರದಲ್ಲಿಯೂ ಮುಂದುವರಿಯುತ್ತಿದ್ದಾರೆ.
ತಮ್ಮ ಹೆಸರನ್ನು ಮಾದಾ ಎಂದು ಬದಲಾಯಿಸಿಕೊಂಡರು. 1976 ರಿಂದ ಚಿತ್ರಗಳಲ್ಲಿ ನಟನೆ ಆರಂಭಿಸಿದ ಮಾಧವಿ ಕನ್ನಡಕ್ಕೆ ಬಂದಿದ್ದು 1981 ರಲ್ಲಿ ತೆರೆಕಂಡ ರಜನಿಕಾಂತ್ ಅಭಿನಯದ `ಘರ್ಜನೆ' ಚಿತ್ರದ ಮೂಲಕ. ನಂತರ `ಹಾಲು ಜೇನು',ಚಾಣಕ್ಯ',`ಗೆದ್ದಮಗ'`ಅನುರಾಗ ಅರಳಿತು',`ಜೀವನ ಚೈತ್ರ,`ಆಕಸ್ಮಿಕ',`ಒಡಹುಟ್ಟಿದವರು' ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರೇಮಿಗಳ ಮನಸ್ಸು ಗೆದ್ದರು. ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.