ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್! Keerthy Suresh Wedding ಫೋಟೋಸ್ ನೋಡಿದ್ದೀರಾ?

keerthysuresh
Published on

Keerthy Suresh Wedding:   ನಟಿ ಕೀರ್ತಿ ಸುರೇಶ್   ಗುರುವಾರ (ಡಿಸೆಂಬರ್ 12) ತನ್ನ ಗೆಳೆಯ ಆಂಟೋನಿ ಟಟಲ್ ಅವರೊಂದಿಗೆ  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಇವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಗೋವಾದಲ್ಲಿ ಗುರುವಾರ (ಡಿಸೆಂಬರ್ 12) ನಡೆದ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಕೀರ್ತಿ ಸುರೇಶ್ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಅಲ್ಲದೇ ಕ್ರಿಶ್ಚಿಯನ್ ರೀತಿಯಲ್ಲಿಯೂ ಮದುವೆ ನಡೆಯಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

Keerthy Suresh Wedding

ಸದ್ಯ ಕೀರ್ತಿ ಸುರೇಶ್ ಅವರ ಮದುವೆಯ ಫೋಟೋಗಳು ವೈರಲ್ ಆಗಿವೆ. ಸಿನಿಮಾ ತಾರೆಯರು, ಅಭಿಮಾನಿಗಳು, ನೆಟಿಜನ್‌ಗಳು ನವ ಜೋಡಿಗೆ ಶುಭ ಕೋರುತ್ತಿದ್ದಾರೆ.

ಮಲಯಾಳಂನ ಖ್ಯಾತ ನಿರ್ಮಾಪಕ ಸುರೇಶ್ ಮತ್ತು ನಟಿ ಮೇನಕಲಾ ಅವರ ಪುತ್ರಿ ಕೀರ್ತಿ ಸುರೇಶ್ ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸ್ಟಾರ್ ಹೀರೋಯಿನ್ ಆದರು.

Keerthy Suresh Wedding

ಮಹಾನಟಿ ಚಿತ್ರಕ್ಕಾಗಿ  ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಪಡೆದರು. ಇದೀಗ ಕೀರ್ತಿ ಬಾಲಿವುಡ್ ನಲ್ಲಿ ಬೇಬಿ ಜಾನ್ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅದೇ ಸಮಯದಲ್ಲಿ, ಮುದ್ದಾದ ಹುಡುಗಿ ತನ್ನ ಗೆಳೆಯನನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Keerthy Suresh Wedding
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net