ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಕೂಡಿಡುವ ಗುರಿಯನ್ನು ಹೊಂದಿರುವ ಕವಿತಾ, ಆರಂಭದಲ್ಲಿ ನಟನಾ ವೃತ್ತಿಗೆ ವಿದಾಯ ಹೇಳಿ ಮಗನ ಶಿಕ್ಷಣಕ್ಕಾಗಿ ಹಣ ಸಂಪಾದಿಸಲು ಫುಡ್ಕಾರ್ಟ್ ಪ್ರಾರಂಭಿಸಿದ್ದರು. ಆದರೀಗ, ಮಗಳ ವಿದ್ಯಾಭ್ಯಾಸಕ್ಕಾಗಿ ಡೆಲಿವರಿ ಗರ್ಲ್ ಆಗಿಯೂ ಕೆಲಸ ಮಾಡುತ್ತಿರುವುದು ನಿಜಕ್ಕೂ ಮನಕಲಕುತ್ತದೆ. ಡೆಲಿವರಿ ಗರ್ಲ್ ಆಗಿ ಲಕ್ಷ್ಮಿ, ವಾರಕ್ಕೆ 14,000 ರೂ. ಸಂಪಾದನೆ ನೋಡುತ್ತಾರಂತೆ. ಸಾಲ ಮತ್ತು ಮಗಳ ಖರ್ಚುಗಳನ್ನು ಇದರಿಂದ ಬಂದ ಹಣದಿಂದಲೇ ಪಾವತಿ ಮಾಡುವುದಾಗಿ ಹೇಳಿಕೊಂಡಿದ್ದಾರೆ.