ಕೃಷ್ಣಸುಂದರಿ ಶ್ವೇತಸುಂದರಿ ಆಗಿದ್ದ್ಹೇಗೆ?; ಟ್ರೋಲ್​ಗೆ ತಮಾಷೆಯಾಗಿ ಕಾಲೆಳೆದ ಕಾಜೊಲ್

Kajol
Published on

ಬಾಲಿವುಡ್​ಗೆ ಪದಾರ್ಪಣೆ ಮಾಡಿದ ಪ್ರಾರಂಭದಲ್ಲಿ ನಟಿ ಕಾಜೊಲ್ ಕೃಷ್ಣಸುಂದರಿ ಎನಿಸಿಕೊಂಡಿದ್ದರು. ಆದರೆ, ದಿನಕಳೆದಂತೆ ಬೆಳ್ಳಗಾಗುತ್ತಾ ಹೋದರು. ಈಗ ಮೂರು ದಶಕಗಳ ಬಳಿಕ ಆ ಕಾಜೊಲ್ ಬಣ್ಣಕ್ಕೂ, ಈ ಕಾಜೊಲ್ ಬಣ್ಣಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ಇದು ಕೇವಲ ಕಾಜೊಲ್ ಮಾತ್ರವಲ್ಲ, ಬಹುತೇಕ ನಟ, ನಟಿಯರು ಬೆಳ್ಳಗಾಗಲು ಚಿಕಿತ್ಸೆ ಪಡೆಯುವುದು, ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಇಂದು ಸರ್ವೆ ಸಾಮಾನ್ಯ.

ಹೀಗಿರುವಾಗ ಆಗಾಗ ಅಭಿಮಾನಿಗಳು ಕಾಜೊಲ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನೀವು ಕೃಷ್ಣ ಸುಂದರಿ ಎನಿಸಿಕೊಂಡಿದ್ದವರು, ಶ್ವೇತಸುಂದರಿ ಹೇಗಾದಿರಿ? ಎಂದು ಕೇಳುತ್ತಿದ್ದರು. ಆದರೆ, ಕಾಜೊಲ್ ಅಷ್ಟಾಗಿ ಆ ಪ್ರಶ್ನೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಯಾವಾಗ ಈ ಪ್ರಶ್ನೆಗಳು ಹೆಚ್ಚಾದವೋ, ‘ನಾನು ಬೆಳ್ಳಗಾಗಲು ಕಾರಣ ಇದೇ’ ಎಂದು ಬರೆದುಕೊಂಡು ಸಂಪೂರ್ಣವಾಗಿ ಮುಖ ಮುಚ್ಚಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ.

ಸದ್ಯ ಇನ್​ಸ್ಟಾಗ್ರಾಂನಲ್ಲಿ ಅವರ ಈ ತಮಾಷೆಯ ಕಮೆಂಟ್ ವೈರಲ್ ಆಗಿದೆ. ಕಳೆದ ವರ್ಷ ‘ಸಲಾಂ ವೆಂಕಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ 48 ವರ್ಷದ ಕಾಜೊಲ್ ಈ ವರ್ಷ ತಲಾ ಒಂದು ವೆಬ್​ಸರಣಿ ಹಾಗೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net