ಈ 5 ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಜಾನ್ವಿ ಕಪೂರ್!

janu
Published on

ಮುಂಬೈ: ಜಾನ್ವಿ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಜಾನ್ವಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಇದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ ವೆಡ್ಡಿಂಗ್ ಸಮಾರಂಭದ್ದಾಗಿದೆ.

ಕೆಲವು ಫೋಟೋಗಳಲ್ಲಿ ಜಾನ್ವಿ ಕಪೂರ್ ಸಹೋದರಿ ಖುಷಿಯೊಂದಿಗೆ ಮಸುಕಾದ ಫೋಟೋಗಳಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವು ಫೋಟೋಗಳಲ್ಲಿ ತನ್ನ ತಂದೆ ಬೋನಿ ಕಪೂರ್ ಜೊತೆಗೆ, ಹಾಗೆಯೇ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ಅವರೊಂದಿಗೂ ಪೋಸ್ ನೀಡಿದ್ದಾರೆ.

ಅಂದಹಾಗೆ ಜಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಅವರ ಕೆಲವು ಫೋಟೋಗಳನ್ನು ಗಮನಿಸಿದಾಗ ಥೇಟ್ ತಾಯಿ ಶ್ರೀದೇವಿಯ ತರಹ ಕಾಣಿಸುತ್ತಾರೆ.

ಜಾನ್ವಿ ತುಂಬಾ ಸ್ಟೈಲಿಶ್ ನಟಿಯಾಗಿದ್ದು, ತನ್ನ ಸೌಂದರ್ಯದಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ವಿಶೇಷವಾಗಿ ಅವರ ಟ್ರಡಿಷನಲ್ ಲುಕ್ ಎಲ್ಲರೂ ಇಷ್ಟಪಡುತ್ತಾರೆ.

ಇಂದು ಜಾನ್ವಿ ಇಂಡಸ್ಟ್ರಿಯಲ್ಲಿ ಚಿರಪರಿಚಿತ ಹೆಸರು. ಅವರ ಸ್ಟೈಲ್ ಅನ್ನು ಇಂದಿನ ಪೀಳಿಗೆ ಬಹಳ ಇಷ್ಟಪಟ್ಟು ಅನುಸರಿಸುತ್ತದೆ. ವಿಶೇಷವಾಗಿ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳು.

ಇತ್ತೀಚೆಗಷ್ಟೇ ಜಾನ್ವಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅವರ ಜನ್ಮದಿನದಂದು 'ದೇವರ' ಸಿನಿಮಾದ ಹೊಸ ಪೋಸ್ಟರ್ ಕೂಡ ರಿವೀಲ್ ಆಗಿತ್ತು.

ಒಂದರ ಹಿಂದೆ ಒಂದರಂತೆ ಸರ್​​​ಪ್ರೈಸ್ ಕೊಡುತ್ತಿರುವ ಜಾನ್ವಿ, ಶಿಖರ್ ಪಹಾಡಿಯಾ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಿದೆ. ಇಬ್ಬರೂ ಈ ಬಗ್ಗೆ ಅಧಿಕೃತ ಹೇಳಿಕೆ ನೀಡದಿದ್ದರೂ, ಕೆಲವು ಫೋಟೋ ಖಂಡಿತವಾಗಿಯೂ ಅವರ ಸಂಬಂಧದ ಸುದ್ದಿಗೆ ಪುಷ್ಠಿ ನೀಡುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net