ಹಾಡಿನ ಚಿತ್ರೀಕರಣದ ವೇಳೆ ಸೆಟ್‌ನಲ್ಲಿ ನಟಿಗೆ ಗಾಯ! Actress Injured

songshoot
Published on

ಮುಂಬೈ​​:  ಸಿನಿಮಾಗಳಿಗೆ ಸಂಬಂಧಿಸಿದಂತೆ ತೆರೆಮರೆಯಲ್ಲಿ ಎಷ್ಟು ಕಷ್ಟವಿದೆ ಎಂಬುದು ಎಲ್ಲರಿಗೂ ತಿಳಿದಿಲ್ಲ. ತಮ್ಮ ನೆಚ್ಚಿನ ನಾಯಕನನ್ನು ತೆರೆಯ ಮೇಲೆ ನೋಡಿ ಸಂಭ್ರಮಿಸುತ್ತಾರೆ. ಆದರೆ ಆ ನಾಯಕನನ್ನು ಚೆನ್ನಾಗಿ ತೋರಿಸಲು ಕೆಲವು ನೂರು ಜನರು ಹೆಣಗಾಡುತ್ತಾರೆ. ಕೆಲವೊಮ್ಮೆ ಶೂಟಿಂಗ್‌ನಲ್ಲಿ ಅಪಘಾತಗಳು ಸಂಭವಿಸುತ್ತವೆ. ಇತ್ತೀಚೆಗಷ್ಟೇ ಶೂಟಿಂಗ್ ಸೆಟ್ ನಲ್ಲಿ ಇಂಥದ್ದೊಂದು ಅವಘಡ ( Actress Injured ) ಸಂಭವಿಸಿದೆ.

ಈ ಅಪಘಾತದಲ್ಲಿ ನಟಿಯೊಬ್ಬರು ಸ್ವಲ್ಪದರಲ್ಲೇ ಪ್ರಾಣ ಉಳಿಸಿಕೊಂಡರು. ಈ ದೃಶ್ಯಗಳು ಈಗ ವೈರಲ್ ಆಗುತ್ತಿವೆ. ಮತ್ತು.. ಆ ನಟಿ ಯಾರು? ಶೂಟಿಂಗ್ ನಲ್ಲಿ ನಡೆದ ಅವಘಡದ ಸಂಪೂರ್ಣ ಮಾಹಿತಿ ತಿಳಿಯೋಣ..

ತುಳಸಿ ಕುಮಾರ್ ಬಾಲಿವುಡ್ ಪ್ರೇಕ್ಷಕರಿಗೆ ಚಿರಪರಿಚಿತ. ಅವರು ಹಿನ್ನೆಲೆ ಗಾಯಕಿ, ಸಂಗೀತಗಾರ್ತಿ ಮತ್ತು ನಟಿ. ಆಕೆ ತನ್ನ ಹೊಸ ಆಲ್ಬಂ ಅನ್ನು ಚಿತ್ರೀಕರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.  ಶೂಟಿಂಗ್ ವೇಳೆ  ನಟಿ ತುಳಸಿ ಕುಮಾರ್ ( tulsi kumar ) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ

ಹಾಡಿಗೆ ಸೆಟ್ ಹಾಕಲಾಗಿತ್ತು. ಚಿತ್ರೀಕರಣ ನಡೆಯುತ್ತಿತ್ತು. ತುಳಸಿ ಕುಮಾರ್ ಕ್ಯಾಮರಾ ನೋಡುತ್ತಾ ಎಕ್ಸ್ ಪ್ರೆಶನ್ ನೀಡುತ್ತಿದ್ದಾರೆ. ಆ ಸೆಟಪ್‌ಗೆ ಪಕ್ಕದ ಆಸರೆಯಾಗಿ ಇಟ್ಟಿದ್ದ ಕಂಬ ಇದ್ದಕ್ಕಿದ್ದಂತೆ ಕೆಳಗೆ ಬಿಳುತ್ತದೆ. ಹಿಂದೆ ಹಾಕಿದ್ದ ಸೆಟಪ್‌ ನಟಿ ತುಳಸಿ ಮೇಲೆ ಒಮ್ಮೆಲೇ ಬಿದ್ದಿತು. ತುಳಸಿ ಕುಮಾರ್ ಮೊದಲೇ ಎಚ್ಚರಗೊಂಡು ಸ್ವಲ್ಪ ಮುಂದೆ ಹೋದರು. ಪಕ್ಕದಲ್ಲೆ ಇರುವ ವ್ಯಕ್ತಿ ಕೂಡಾ ಸಹಾಯಕ್ಕೆ ಬಂದರು. ಆದರೆ, ತುಳಸಿಕುಮಾರ್ ಅದಾಗಲೇ ಗಾಯಗೊಂಡಿರುವುದು ಕಂಡುಬಂದಿದೆ.

ತುಳಸಿ ಕುಮಾರ್ ( tulsi kumar ) ಇದ್ದಕ್ಕಿದ್ದಂತೆ ಆಘಾತಕ್ಕೊಳಗಾದರು. ಅವಳ ಮುಖದಲ್ಲಿ ಭಯ ಎದ್ದು ಕಾಣುತ್ತಿತ್ತು. ತಕ್ಷಣ ಎಲ್ಲಾ ಸಿಬ್ಬಂದಿ ತುಳಸಿ ಕುಮಾರ್ ಬಳಿಗೆ ಬಂದರು. ಆಕೆಗೆ ಏನಾದರೂ ಪೆಟ್ಟು ಬಿದ್ದಿದೆಯೇ ಎಂದು ನೋಡಿದರು. ಈ ಎಲ್ಲಾ ದೃಶ್ಯಗಳು ಕ್ಯಾಮರಾದಲ್ಲಿ ದಾಖಲಾಗಿವೆ. ಸದ್ಯ ಈ ದೃಶ್ಯಗಳು ವೈರಲ್ ಆಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net