ಅರಮನೆಯಲ್ಲಿ ಹನ್ಸಿಕಾ ಮದುವೆ; ಸೊಹೈಲ್ ಖಟುರಿಯಾ ಜತೆ ಅದ್ಧೂರಿ ವಿವಾಹೋತ್ಸವ

Hansika
Published on

ಕನ್ನಡದ ‘ಬಿಂದಾಸ್’ ಚಿತ್ರ ಸೇರಿದಂತೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹನ್ಸಿಕಾ ಮೊಟ್ವಾನಿ ಮದುವೆ, ಉದ್ಯಮಿ ಸೊಹೈಲ್ ಖಟುರಿಯಾ ಜತೆ ನೆರವೇರಿದೆ. ರಾಜಸ್ತಾನದ ಜೈಪುರದಲ್ಲಿರುವ ಮುಂಡೋಟಾ ಅರಮನೆಯಲ್ಲಿ ಎರಡೂ ಕುಟುಂಬದವರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಭಾನುವಾರ (ಡಿ.4) ಹಾರ ಬದಲಿಸಿಕೊಂಡಿದೆ.

ಅದಕ್ಕೂ ಮುನ್ನ ಎರಡು ದಿನಗಳ ಕಾಲ ಅರಮನೆಯಲ್ಲಿಯೇ ಸಂಗೀತ ಕಾರ್ಯಕ್ರಮ ಮತ್ತು ಮೆಹೆಂದಿ ಶಾಸ್ತ್ರಗಳು ನಡೆದಿದ್ದವು. ಇದೇ ನವೆಂಬರ್​ನಲ್ಲಿ ಪ್ಯಾರಿಸ್​ನ ಐಫೆಲ್ ಟವರ್ ಎದುರು ಸೊಹೈಲ್, ರಿಂಗ್ ಹಿಡಿದು ಮಂಡಿಯೂರಿ ಹನ್ಸಿಕಾ ಬಳಿ ಮದುವೆಯ ನಿವೇದನೆ ಮಾಡಿಕೊಂಡಿದ್ದರು.

ಮದುವೆ ಅಂತ ಹನ್ಸಿಕಾ ಸಿನಿಮಾಗಳಿಂದೇನೂ ದೂರ ಬಂದಿಲ್ಲ. ಈ ವರ್ಷ ಅವರು ನಟಿಸಿದ್ದ ‘ಮಹಾ’ ಚಿತ್ರ ಬಿಡುಗಡೆಯಾಗಿದ್ದು, ‘ಪಾರ್ಟನರ್’, ‘105 ಮಿನಿಟ್ಸ್’ ತೆರೆಗೆ ಬರಲು ರೆಡಿಯಿವೆ. ಜತೆಗೆ ‘ಮೈ ನೇಮ್ ಈಸ್ ಶ್ರುತಿ’, ‘ರೌಡಿ ಬೇಬಿ’, ‘ಗಾರ್ಡಿಯನ್’ ಸೇರಿದಂತೆ ಇನ್ನೂ ಕೆಲ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net