Actress Divorce: ಪತಿಯೊಂದಿಗೆ ಭಿನ್ನಾಭಿಪ್ರಾಯ! ನಟಿ ಊರ್ಮಿಳಾ ಮಾತೋಂಡ್ಕರ್ 8 ವರ್ಷಗಳ ದಾಂಪತ್ಯ ಜೀವನ ಅಂತ್ಯ!

urmila matondkar
Published on

ಮುಂಬೈ:  ಬಾಲಿವುಡ್ ನಟಿ (Actress) ಊರ್ಮಿಳಾ ಮಾತೋಂಡ್ಕರ್ (Urmila Matondkar) ವಿಚ್ಛೇದನಕ್ಕೆ (Divorce) ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಊರ್ಮಿಳಾ ತನ್ನ ಪತಿ ಮೋಸಿನ್ ಅಖ್ತರ್ ಮಿರ್ ಜೊತೆ ತನ್ನ 8 ವರ್ಷದ ಮದುವೆಯ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ..

ಮುಂಬೈ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಬಗ್ಗೆ ಊರ್ಮಿಳಾ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ ಆದರೆ ನಾಲ್ಕು ತಿಂಗಳ ಹಿಂದೆಯೇ ಊರ್ಮಿಳಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳು ಬಹಿರಂಗಪಡಿಸಿವೆ. ಇವರಿಬ್ಬರು ಪರಸ್ಪರ ಒಪ್ಪಿಗೆಯಿಂದ ಬೇರ್ಪಡುತ್ತಿಲ್ಲ.. ಊರ್ಮಿಳಾ ಮಾತ್ರ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ ತಿಳಿದುಬಂದಿಲ್ಲ.

ಊರ್ಮಿಳಾ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಿಂದಿ ಮತ್ತು ತೆಲುಗಿನಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 2014 ರಲ್ಲಿ, ಪ್ರಸಿದ್ಧ ಬಾಲಿವುಡ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಸೋದರಳಿಯ ಮದುವೆಯಲ್ಲಿ ಊರ್ಮಿಳಾ ಮತ್ತು ಮೊಸಿನಾ ಭೇಟಿಯಾದರು. ಕೆಲವೇ ದಿನಗಳಲ್ಲಿ ಇವರಿಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತ್ತು.

2016 ರಲ್ಲಿ, ಊರ್ಮಿಳಾ ಕಾಶ್ಮೀರಿ ಉದ್ಯಮಿ ಮೋಸಿನ್ ಅಖ್ತರ್ ಮಿರ್ ಅವರನ್ನು ವಿವಾಹವಾದರು. ಕೆಲವೇ ಜನರ ಸಮ್ಮುಖದಲ್ಲಿ ಮದುವೆಯಾದರು. ಆದರೆ ಈಗ ಇವರ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದೆಯಂತೆ. ಆದರೆ ಊರ್ಮಿಳಾ ವಿಚ್ಛೇದನಕ್ಕೆ ಕಾರಣಗಳು ತಿಳಿದುಬಂದಿಲ್ಲ. ಊರ್ಮಿಳಾ ಮೋಸಿನ್‌ಗಿಂತ 10 ವರ್ಷ ದೊಡ್ಡವಳು. ಆಕೆಗೆ ಈಗ 50 ವರ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net