

ಮುಂಬೈ: ಮರಾಠಿ ನಟಿ ಮತ್ತು ಶಿವಸೇನಾ ನಾಯಕಿ ದೀಪಾಲಿ ಭೋಸಲೆ ಸೈಯದ್ ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಹೊಂದಿದ್ದಾರೆಂದು ಅವರ ಮಾಜಿ ಸಹಾಯಕ ಆರೋಪಿಸಿದ್ದರು. ಈ ಕುರಿತಾಗಿ ನಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮರಾಠಿ ನಟಿ ದೀಪಾಲಿ ಸೈಯದ್ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಹೊಂದಿದ್ದಾರೆ. ಎಂದು ಆರೋಪಿಸಿದ ಮಾಜಿ ಪಿಎ ಬಾಬುರಾವ್ ಶಿಂಧೆ ವಿರುದ್ಧ ನಟಿ ಇದೀಗ ಮಾನಹಾನಿ ಮತ್ತು ಬೆದರಿಕೆ ಹಾಕಿದ್ದಕ್ಕಾಗಿ ದೂರು ದಾಖಲಿಸಿದ್ದಾರೆ.
ನನಗೆ ಭೂಗತ ಜಗತ್ತಿನೊಂದಿಗೆ ಸಂಪರ್ಕವಿದೆ ಎಂದು ಶಿಂಧೆ ಹೇಳುತ್ತಿದ್ದಾರೆ. ನನ್ನ ನಿಜವಾದ ಹೆಸರು ಸೋಫಿಯಾ ಸಯೀದ್ ಮತ್ತು ನಾನು ಪಾಕಿಸ್ತಾನಿ ಪೌರತ್ವವನ್ನು ಸ್ವೀಕರಿಸಿದ್ದೇನೆ. ನಾನು ಭಾರತದಲ್ಲಿ ಉಳಿಯಲು ನಕಲಿ ಪಾಸ್‌ಪೋರ್ಟ್ ಮಾಡಿದ್ದೇನೆ ಮತ್ತು ಪಾಕಿಸ್ತಾನಿ ಬ್ಯಾಂಕ್‌ನಲ್ಲಿ ಬ್ಯಾಂಕ್ ಖಾತೆಯನ್ನು ಸಹ ಹೊಂದಿದ್ದೇನೆ . ನಾನು ಲಂಡನ್‌ನಲ್ಲಿ ಆಸ್ತಿ ಹೊಂದಿದ್ದೇನೆ ಎಂದು ಹೇಳಿದ್ದಾನೆ. ನನಗೂ ಕೊಲೆ ಬೆದರಿಕೆ ಹಾಕಿದ್ದಾನೆ ಹೇಳಿದ್ದಾರೆಂದು ದೀಪಾಲಿ ದೂರಿನಲ್ಲಿ ತಿಳಿಸಿದ್ದಾರೆ.
ಸಯ್ಯದ್ ಅವರ ಮಾಜಿ ಪಿಎ ಬಾಬುರಾವ್ ಶಿಂಧೆ ವಿರುದ್ಧ ಸೆಕ್ಷನ್ 509 (ಮಹಿಳೆಯರ ಮಾನಹಾನಿ ಮಾಡುವ ಉದ್ದೇಶದಿಂದ ಪದ, ಹಾವಭಾವ ಅಥವಾ ಕೃತ್ಯ), 506 (2) (ಕ್ರಿಮಿನಲ್ ಬೆದರಿಕೆ) ಮತ್ತು 500 (ಮಾನನಷ್ಟ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2019 ರಲ್ಲಿ ಅನುಮತಿ ಮತ್ತು ಅರಿವಿಲ್ಲದೆ ಮರಾಠಿ ಚಲನಚಿತ್ರಕ್ಕಾಗಿ ಮಹಿಳೆಯರ ಆಡಿಷನ್ ತೆಗೆದುಕೊಂಡ ನಂತರ ಅವರನ್ನು ವಜಾಗೊಳಿಸಲಾಗಿದೆ ಎಂದು ದೀಪಾಲಿ ಹೇಳಿದ್ದಾರೆ.
ಇದನ್ನೂ ಓದಿ: ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು ದೀಪಾಲಿ ಸೈಯದ್ ಯಾರು?: ದೀಪಾಲಿ ಮರಾಠಿ ಚಲನಚಿತ್ರ ವಲಯದಲ್ಲಿ ಪ್ರಸಿದ್ಧ ನಟಿ ಮತ್ತು ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. 2019 ರಲ್ಲಿ, ದೀಪಾಲಿ ಕೂಡ ರಾಜಕೀಯಕ್ಕೆ ಕಾಲಿಟ್ಟಿದ್ದರು ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮುಂಬ್ರಾ-ಕಲ್ವಾ ವಿಧಾನಸಭಾ ಕ್ಷೇತ್ರದಿಂದ ಶಿವಸೇನೆಗೆ ಸ್ಪರ್ಧಿಸಿದ್ದರು. ಸಿನಿಮಾರಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ.