

ಮುಂಬೈ: ನಟಿ, ನಟಿಯರು ತಮ್ ಕೆಲಸಗಳಲ್ಲಿ ಬ್ಯೂಸಿಯಾಗಿರುತ್ತಾರೆ. ಕೊಂಚ ಸಮಯ ಸಿಕ್ಕಾಗ ಸೋಶಿಯಲ್ ಮೀಡಿಯಾ ಮೂಲಕವಾಗಿ ಅಭಿಮಾನಿಗಳ ಕತೆ ಸಂಪರ್ಕಕ್ಕೆ ಬರುತ್ತಾರೆ. ಕೆಲವೊಮ್ಮೆ ಫ್ಯಾನ್ಸ್ ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಾರೆ. ಹೀಗೆ ಇಲ್ಲೊಬ್ಬಳು ಸ್ಟಾರ್ ನಟಿ ಅವರ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದು, ಸಖತ್ ವೈರಲ್ ಆಗಿದೆ.
ತೆಲುಗು ನಟಿ ದಕ್ಷಾ ನಗರ್ಕರ್ ಅವರ ತೊಡೆಯ ಬಗ್ಗೆ ಅಭಿಮಾನಿಯೋರ್ವ ಇನ್ಸ್ಟಾಗ್ರಾಮ್ನಲ್ಲಿ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ನಟಿ ಸಿಟ್ಟು ಮಾಡಿಕೊಂಡಿಲ್ಲ, ಬದಲಿಗೆ ಫನ್ನಿ ಆಗಿ ಉತ್ತರಿಸಿದ್ದಾರೆ.
‘ನಾನು ನಿಮ್ಮ ತೊಡೆಯ ದೊಡ್ಡ ಅಭಿಮಾನಿ. ಅವುಗಳ ರಹಸ್ಯ ಏನು’ ಎಂದು ಅಭಿಮಾನಿಯೋರ್ವ ಪ್ರಶ್ನೆ ಮಾಡಿದ್ದಾನೆ. ಈ ಪ್ರಶ್ನೆಯನ್ನು ಅವರು ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ನಾನು ಮಸಾಲ ವಡೆ ತಿನ್ನುತ್ತೇನೆ’ ಎಂದು ಉತ್ತರ ನೀಡಿದ್ದಾರೆ. ಸದ್ಯ ಈ ಫನ್ನಿ ಉತ್ತರ ವೈರಲ್ ಆಗುತ್ತಿದೆ. ನಟಿಯ ಉತ್ತರವನ್ನು ಅನೇಕರು ಶ್ಲಾಘಿಸಿದ್ದಾರೆ.
ದಕ್ಷಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2014ರಲ್ಲಿ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 10 ವರ್ಷಗಳ ಮೇಲಾಗಿದೆ. ಅವರ ಮೊದಲ ಸಿನಿಮಾ ‘ಎಕೆ ರಾವ್ ಪಿಕೆ ರಾವ್’. ಈ ಚಿತ್ರ ಯಶಸ್ಸು ಕಾಣಲಿಲ್ಲ. ನಂತರ ‘ಹೋರಾ ಹೋರಿ’, ‘ಹುಶಾರು’, ‘ಜಾಂಬಿ ರೆಡ್ಡಿ’, ‘ಬಂಗಾರ್ ರಾಜು’ ಚಿತ್ರಗಳಲ್ಲಿ ನಟಿಸಿದರು. 2023ರಲ್ಲಿ ರಿಲೀಸ್ ಆದ ರವಿತೇಜ ನಟನೆಯ ‘ರಾವಣಾಸುರ’ ಚಿತ್ರದಲ್ಲಿ ಜಾನು ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು.