ಅವರು ಯಾವತ್ತೂ ತಾನೊಬ್ಬ ದೊಡ್ಡ ನಟ ಎಂಬುದನ್ನು ತೋರಿಸಲಿಲ್ಲ: ನಟಿ ಚೈತ್ರಾ ಜೆ.ಆಚಾರ್​

Untitled design (14)
Published on

ಬೆಂಗಳೂರು: ವಿಜಯವಾಣಿ ನೇರ ಸಂದರ್ಶನದಲ್ಲಿ ಮಾತನಾಡಿದ ನಟಿ ಚೈತ್ರಾ ಜೆ.ಆಚಾರ್, ತಲೆದಂಡ ಚಿತ್ರದಲ್ಲಿ ಸಂಚಾರಿ ವಿಜಯ್​​ ಅವರೊಟ್ಟಿಗೆ ಕೆಲಸ ಮಾಡಿದ ದಿನಗಳನ್ನು ಮೆಲುಕು ಹಾಕಿದ್ದಾರೆ.

"ನಾನು ತಲೆದಂಡ ಚಿತ್ರವನ್ನು ಮಾಡುವಾಗ ಸಂಚಾರಿ ವಿಜಯ್ ಅವರು ಸುಮಾರು ಸಿನಿಮಾಗಳಲ್ಲಿ ಅತ್ಯುತ್ತಮ ಪಾತ್ರಗಳಲ್ಲಿ ಅಭಿನಯಿಸಿದ್ದರು. ನನಗೆ ಅದು ಎರಡನೇ ಚಿತ್ರವಾಗಿತ್ತು. ನನ್ನನ್ನು ಸೋಲಿಗ ಹುಡುಗಿಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಆದ್ರೆ, ಪಾತ್ರದ ಬಗ್ಗೆ ನನಗೆ ಏನೇನೂ ತಿಳಿದಿರಲಿಲ್ಲ. ವಿಜಯ್​​ ಅವರು ಕ್ಯಾರೆಕ್ಟರ್​ ಅನ್ನು ಬಹಳ ಚೆನ್ನಾಗಿ ಅರಿತಿದ್ದರು. ಪರದೆಯ ಮೇಲೆ ಸಂಚಾರಿ ವಿಜಯ್​ ಅವರ ಅಭಿನಯವನ್ನು ಈಗಾಗಲೇ ನೀವು ನೋಡಿ ಮೆಚ್ಚಿದ್ದೀರಿ" ಎಂದು ಹೇಳಿದರು.

"ನನಗೆ ಅವರನ್ನು ನೋಡಿ ಹೇಗಪ್ಪಾ ಇವರಂತೆ ನಟಿಸುವುದು ಎಂಬ ಪ್ರಶ್ನೆ ಕಾಡುತ್ತಿತ್ತು. ಆಗ ವಿಜಯ್​ ಅವರು ನಿನಗೆ ಹೇಗೆ ಅನಿಸುತ್ತದೆ ಹಾಗೆಯೇ ನಟಿಸುವ ಪ್ರಯತ್ನ ಮಾಡು, ಚರ್ಚೆ ಮಾಡಿ ಒಟ್ಟಿಗೆ ನಟಿಸೋಣ ಎಂದು ಹೇಳಿ ದೈರ್ಯ ತುಂಬುತ್ತಿದ್ದರು" ಎಂದು ಹೇಳಿದ್ದಾರೆ. ಮತ್ತಷ್ಟು ಕುತೂಹಲಕಾರಿ ವಿಷಯಗಳನ್ನು ತಿಳಿಯಲು ಕೆಳಗಿನ ವಿಡಿಯೋ ಲಿಂಕ್​ ಅನ್ನು ಕ್ಲಿಕ್​ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net