ಬ್ಲೌಸ್ ಧರಿಸದೇ ಸೀರೆಯುಟ್ಟ ‘ಟೋಬಿ’ ನಟಿ ಚೈತ್ರಾ ಜೆ ಆಚಾರ್; ಹೊಸ ಅವತಾರಕ್ಕೆ ಪಡ್ಡೆಗಳು ಫಿದಾ

chaitra j achar
Published on

ಬೆಂಗಳೂರು: ಚೈತ್ರಾ ಆಚಾರ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಭರವಸೆಯ ನಟಿಯಾಗಿ ಬೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಚೈತ್ರಾ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಖತ್​​ ವೈರಲ್​ ಆಗಿದೆ.

ಡ್ಯಾನ್ಸ್​, ಅಭಿನಯ ಎಂದು ಕಾಲ ಕಳೆಯುವ ನಟಿ ಆಗಾಗ ನಟಿ ಮೈಚಳಿ ಬಿಟ್ಟು ಸಖತ್​ ಹಾಟ್​ ಲುಕ್​ನಲ್ಲಿ ಫೋಟೋಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ನಟಿ ಚೈತ್ರಾ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಸಖತ್​​ ವೈರಲ್​ ಆಗಿದೆ.

ಕೇರಳ ಕುಟ್ಟಿಯ ರೀತಿಯಲ್ಲಿ ಸೀರೆ ಉಟ್ಟು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಆದರೆ ಈ ಫೋಟೋಗೆ ಕಮೆಂಟ್ಸ್ ಆಫ್​ ಮಾಡಿದ್ದಾರೆ. ಸದ್ಯ ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.

ಚೈತ್ರಾ ಆಚಾರ್‌ ಬೋಲ್ಡ್​ ಆಗಿ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಸದ್ಯ ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಟಿ ಚೈತ್ರಾ ಆಚಾರ್​ ಆಫ್ ಸ್ಕ್ರೀನ್ ನಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

‘ಟೋಬಿ’ ಮತ್ತು ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗಳು ಮೂಲಕ ಖ್ಯಾತಿ ಗಳಿಸಿಕೊಂಡ ನಟಿ ಚೈತ್ರಾ ಆಚಾರ್‌ ಅವರು ಹೊಸ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net