ಇಸ್ರೇಲ್-ಹಮಾಸ್ ಯುದ್ಧ: ಉಗ್ರರನ್ನು ಹೊಗಳಿದ್ದಕ್ಕೆ ನಟಿ ಬಂಧನ

war (1)
Published on

ಟೆಲ್ ಅವಿವ್: ಇಸ್ರೇಲ್-ಹಮಾಸ್ ಯುದ್ಧದಿಂದಾಗಿ, ಪ್ರಪಂಚದಾದ್ಯಂತ ಜನರು ಎರಡು ಬಣಗಳಾಗಿ ವಿಂಗಡಣೆಯಾಗಿದ್ದಾರೆ. ಈ ಯುದ್ಧದಿಂದಾಗಿ ಇದುವರೆಗೆ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ಬಾಧಿತರಾಗಿದ್ದಾರೆ. ಇದೇ ವೇಳೆ ಭಯೋತ್ಪಾದಕರನ್ನು ಹೊಗಳಿದ ನಟಿಯೊಬ್ಬರನ್ನು ಇಸ್ರೇಲಿ ಪೊಲೀಸರು ಬಂಧಿಸಿದ್ದಾರೆ.

ಭಯೋತ್ಪಾದಕರನ್ನು ಹೊಗಳಿದ್ದಕ್ಕಾಗಿ ಅರೆಸ್ಟ್
ಭಯೋತ್ಪಾದಕರನ್ನು ಹೊಗಳಿದ್ದಕ್ಕಾಗಿ ನಟಿಯನ್ನು ಬಂಧಿಸಲಾಗಿದೆ ಎಂದು ಇಸ್ರೇಲಿ ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್​​​ಐ ವರದಿ ಮಾಡಿದೆ. 'ಗಾಜಾದಲ್ಲಿ ಯುದ್ಧ ಮುಂದುವರಿದಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವ ಮತ್ತು ಬೆಂಬಲಿಸುವವರ ವಿರುದ್ಧ ಸಾರ್ವಕಾಲಿಕ ಹೋರಾಡುತ್ತಿದ್ದೇವೆ' ಎಂದು ಇಸ್ರೇಲಿ ಪೊಲೀಸರು ಹೇಳಿಕೆ ನೀಡಿದ್ದಾರೆ.

ನಜರೆತ್ ನಗರದಲ್ಲಿ ಬಂಧನ
ಇಸ್ರೇಲ್‌ನ ಉತ್ತರ ಜಿಲ್ಲೆ ನಜರೆತ್‌ನ ನಟಿಯನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಟಿ ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದು, ಯುದ್ಧದ ಬಗ್ಗೆ ದ್ವೇಷದ ಭಾಷಣಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಇಸ್ರೇಲ್ ಪೊಲೀಸರು ಕ್ರಮ ಕೈಗೊಂಡು ಆಕೆಯನ್ನು ಬಂಧಿಸಿದ್ದಾರೆ.

ಬಂಧಿತ ನಟಿ ನಜರೆತ್ ನಗರದ ನಿವಾಸಿ. ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಿಸಿದಾಗ ನಟಿಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಬಳಿಕ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಅರೇಬಿಯಾದಲ್ಲಿದೆ ಅಭಿಮಾನಿ ಬಳಗ
ಪೊಲೀಸರ ಪ್ರಕಾರ, ನಟಿ ಅರಬ್ ಸಮುದಾಯದಲ್ಲಿ ಉತ್ತಮ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಟಿ ಹಂಚಿಕೊಂಡ ಪೋಸ್ಟ್‌ನಲ್ಲಿ ಭಯೋತ್ಪಾದಕರನ್ನು ಹೊಗಳಲಾಗಿದೆ. ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಉತ್ತೇಜಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net