ಸಿಂಗಲ್ ಆಗಿರೋದು ಬೆಸ್ಟ್ …ನಾನು ಮದುವೆಯಾಗಲ್ಲ ಎಂದ ನಟಿ ಆಂಡ್ರಿಯಾ

Andrea Jeremiah
Published on

ಬೆಂಗಳೂರು:  ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಾ, ಬ್ಯೂಸಿಯಾಗಿರುವ ನಟಿ ಆಂಡ್ರಿಯಾ ಜೆರೆಮಿಯಾ ಮದುವೆಯ ಬಗ್ಗೆ ಯೋಚಿಸುತ್ತಿಲ್ಲ, ನಾನು ಮದುವೆಯಾಗುವುದಿಲ್ಲ ಎಂದಿದ್ದಾರೆ.

ಆಂಡ್ರಿಯಾ ಜೆರೆಮಿಯಾ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈ ಚೆಲುವೆಗೆ ನಿರೀಕ್ಷೆಯಷ್ಟು ಮನ್ನಣೆ ಸಿಕ್ಕಿರಲಿಲ್ಲ. ಇತ್ತೀಚೆಗೆ ಅವರು ವೆಂಕಟೇಶ್ ಅಭಿನಯದ ಸೈಂಧವ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ಇತ್ತೀಚೆಗಷ್ಟೇ ಈ ಚೆಲುವೆ ತನ್ನ ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿ, ನಾನು ಮದುವೆಯಾಗಲು ಬಯಸುವುದಿಲ್ಲ. ನಾನು 20-25 ನೇ ವಯಸ್ಸಿನಲ್ಲಿ ಮದುವೆಯಾಗಲು ಬಯಸಿದ್ದೆ. ಆದರೆ ಆ ಸಮಯದಲ್ಲಿ ಅದು ಸಾಧ್ಯವಾಗಲಿಲ್ಲ. ಈಗ ಮದುವೆಯಾದರೆ ಖುಷಿ ಸಿಗುತ್ತದೆ ಅಂತಲ್ಲ, ಮದುವೆ ಆಗದಿದ್ದರೂ ತುಂಬಾ ಖುಷಿಯಾಗಿರುತ್ತೇನೆ ಎಂದಿದ್ದಾರೆ.

ಎಷ್ಟು ಜನರು ಸಂತೋಷದಿಂದ ಮದುವೆಯಾಗಿದ್ದಾರೆ?. ಮದುವೆಯಾದವರ ಬಗ್ಗೆ ಮಾತನಾಡಲು ತಾನು ತಯಾರಿಲ್ಲ.. ಈ ಜೀವನಕ್ಕೆ ಒಗ್ಗಿಕೊಂಡಿದ್ದೇನೆ.. ಮದುವೆಯ ಬಗ್ಗೆ ಈಗಲೋ ಮುಂದೆಯೂ ಯೋಚಿಸುವುದಿಲ್ಲ.. ಮದುವೆಯಾಗುವುದಿಲ್ಲ ಎಂದಿದ್ದಾರೆ.

ಸಿಂಗಲ್ ಲೈಫ್ ಬೆಸ್ಟ್ ಎನ್ನುತ್ತಿರುವ ಆಂಡ್ರಿಯಾ ಜೆರೆಮಿಯಾ, ಸದ್ಯ ದೆವ್ವ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಥಿಯೇಟರ್‌ಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net