

ಚೆನ್ನೈ: ದಕ್ಷಿಣ ಭಾರತದ ಜನಪ್ರಿಯ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಒಟ್ಟು 20 ಕೆಜಿ ತೂಕ ಇಳಿಸಿರುವುದಾಗಿ ತಿಳಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಮುಂಚಿನ ಮತ್ತು ಈಗಿನ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಫಾಲೋವರ್ಸ್ಗೆ ನೀವೂ ಫಿಟ್ ಆಗಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ.
ಈ ಮುನ್ನವೂ ಸಣ್ಣ ಆಗಿ ಸುದ್ದಿ ಮಾಡಿದ್ದ ಖುಷ್ಬೂ, ತಮ್ಮ ಈ ಶಾರೀರಿಕ ಬದಲಾವಣೆಗಾಗಿ ಅವರು ಪಾಲಿಸಿದ ಡಯಟ್ ಅಥವಾ ಎಕ್ಸರ್ಸೈಸ್ ಪ್ಲಾನ್ ಬಗ್ಗೆ ಏನೂ ಮಾಹಿತಿ ನೀಡಿಲ್ಲ. ಆದರೆ, ಅತ್ಯಂತ ಉತ್ತಮ ಆರೋಗ್ಯ ಹೊಂದಿದ್ದೇನೆ ಎಂದು ಬರೆದಿದ್ದಾರೆ. ಜೊತೆಗೆ, ತಮ್ಮ ಅಭಿಮಾನಿಗಳಿಗೂ ತಮ್ಮ ಆರೋಗ್ಯದ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ.
"ಅಲ್ಲಿಂದ ಇಲ್ಲೀವರೆಗೆ. 20 ಕೆಜಿ ಹಗುರವಾಗಿದ್ದೀನಿ... ಅತ್ಯಂತ ಉತ್ತಮ ಆರೋಗ್ಯ ಹೊಂದಿರುವ ಹಾಗಿದೆ. ನಿಮ್ಮ ಬಗ್ಗೆ ಕಾಳಜಿ ವಹಿಸಿ, ನೆನಪಿರಲಿ, ಆರೋಗ್ಯವೇ ಸಂಪತ್ತು. ಇನ್ನು ನನಗೆ ಹುಷಾರಿಲ್ವ ಎಂದು ಕೇಳುವವರಿಗೆ, ನಾನು ಕಾಳಜಿಗಾಗಿ ಧನ್ಯವಾದ ಹೇಳಬಯಸುತ್ತೇನೆ. ನಾನು ಹಿಂದೆಂದೂ ಇಷ್ಟು ಫಿಟ್ ಆಗಿರಲಿಲ್ಲ. ನಿಮ್ಮಲ್ಲಿ 10 ಜನಕ್ಕಾದರೂ ತೂಕ ಇಳಿಸಿಕೊಂಡು ಫಿಟ್ ಆಗಲು ನಾನು ಪ್ರೇರಣೆ ನೀಡಿದರೆ, ನಾನು ಯಶಸ್ವಿಯಾಗಿದ್ದೇನೆ ಎಂದುಕೊಳ್ಳುತ್ತೇನೆ" ಎಂದು ಖುಷ್ಬೂ ಬರೆದಿದ್ದಾರೆ.