' ಗಡಗಡ ನಡುಕ , ಅಸ್ಪಷ್ಟ ಮಾತು' ನಟ ವಿಶಾಲ್​ಗೆ ಜ್ವರ ಬಂದ್ರೆ ಕುತ್ತಿಗೆ ಮೇಲಿರುವ ಗುರುತು ಏನು? ಇವ್ರ ಈ ಸ್ಥಿತಿಗೆ ಏನೋ ಕಾರಣ ಇದೆ ಎಂದ ನೆಟ್ಟಿಗರು..Actor Vishal Has A Mark On His Neck

Vishal
Published on

 ಹೈದ್ರಾಬಾದ್​​:  ( Actor Vishal Has A Mark On His Neck  ) ತಮಿಳಿನ ಖ್ಯಾತ ನಟ ವಿಶಾಲ್  ಚಿತ್ರದ ಪ್ರೀ ರಿಲೀಸ್ ಫಂಕ್ಷನ್​ವೊಂದರಲ್ಲಿ ಮೈಕ್ ಹಿಡಿದಾಗ ಕೈ ನಡುಗುತ್ತಿತ್ತು, ತೊದಲುತ್ತಾ ಮಾತನಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಗೆ ನಟನಿಗೆ ಏನೋ ಸಮಸ್ಯೆ ಆಗಿದೆ ಎಂದು ಆತಂಕಕ್ಕೊಳಗಾಗಿದ್ದರು.  ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಸುಂದರ್ ಸಿ ನಿರ್ದೇಶನದ, ನಟ ವಿಶಾಲ್ ಅಭಿನಯದ ‘ಮದ ಗಜರಾಜ’ ಪೊಂಗಲ್ ಹಬ್ಬಕ್ಕೆ ಜನವರಿ 12ರಂದು ಬಿಡುಗಡೆಯಾಗಲಿದೆ. 13 ವರ್ಷಗಳ ನಂತರ ಚಿತ್ರ ಬಿಡುಗಡೆಯಾಗುತ್ತಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. ಮದಗಜರಾಜ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ  ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಸುಂದರ್ ಸಿ, ನಟ ವಿಶಾಲ್, ಸಂಗೀತ ಸಂಯೋಜಕ ವಿಜಯ್ ಆಂಟೋನಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಟ ವಿಶಾಲ್ ಅವರ ನೂತನ ಸಿನೆಮಾ ಮದಗಜರಾಜ ಚಿತ್ರದ ಪ್ರೀ ರಿಲೀಸ್ ಫಂಕ್ಷನ್ , ಅದರಲ್ಲಿ ನಟ ವಿಶಾಲ್ ಮೈಕ್ ಹಿಡಿದಾಗ ಕೈ ನಡುಗುತ್ತಿತ್ತು. ಮಾತನಾಡಲು ಕಷ್ಟ ಪಡುತ್ತಿದ್ದರು  ಅನಾರೋಗ್ಯದಿಂದ ಬಳಲುತ್ತಿರುವುದು ಕಂಡು ಬಂತ್ತು.  ನಟ ವಿಶಾಲ್‌ಗೆ ಏನಾಗಿದೆ ಎಂದು ಸಿನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

Actor Vishal

ವಿಶಾಲ್ ಕೈಗಳು ಜೋರಾಗಿ ನಡುಗುತ್ತಿದ್ದವು. ಅವರು ನಡುಗುವ ಧ್ವನಿಯಲ್ಲಿ ಮಾತನಾಡಿದರು. ನಂತರ  ವಿಶಾಲ್ ಗೆ ಸೋಫಾ ಹಾಕಿ ಕುಳಿತುಕೊಳ್ಳು ವ್ಯವಸ್ಥೆ ಮಾಡಲಾಯಿತ್ತು. ಆ ಬಳಿಕ ನಿರ್ದೇಶಕ ಸುಂದರ್ ಸಿ ಹಾಗೂ ಸಂಗೀತ ಸಂಯೋಜಕ ವಿಜಯ್ ಆಂಟೋನಿ ಅವರನ್ನು ಸೋಫಾ ಮೇಲೆ ಕೂರಿಸಿಕೊಂಡು ಮೂವರನ್ನು ವೇದಿಕೆ ಮೇಲೆ ಕೂರಿಸಿ ಮಾತು ಆರಂಭಿಸಿದರು. ಈ ಸುದ್ದಿಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿತ್ತು.  ವಿಶಾಲ್​ ಅವರ ಫ್ಯಾನ್ಸ್​​ ಆತಂಕ ವ್ಯಕ್ತಪಡಿಸಿದ್ದಾರೆ.

ಸದ್ಯ ಚೆನ್ನೈನ ಅಪೋಲೋ ಆಸ್ಪತ್ರೆ ವಿಶಾಲ್ ಆರೋಗ್ಯದ ಬಗ್ಗೆ ವರದಿ ನೀಡಿದೆ. ಅದರ ಪ್ರಕಾರ ನಟ ವಿಶಾಲ್​ಗೆ ವೈರಲ್ ಜ್ವರ ಇರುವುದು ದೃಢಪಟ್ಟಿದೆ. ಸೂಕ್ತ ಚಿಕಿತ್ಸೆ ಹಾಗೂ ಸಂಪೂರ್ಣ ವಿಶ್ರಾಂತಿಯನ್ನು ಪಡೆಯಲು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆಂದು ಅಪೋಲೋ ಆಸ್ಪತ್ರೆ ವರದಿಯಲ್ಲಿ ತಿಳಿಸಲಾಗಿದೆ.

Vishal

ವಿಶಾಲ್​ ಅವರಿಗೆ ಗಂಭೀರವಾದ ಸಮಸ್ಯೆ ಏನಿಲ್ಲ. ಜ್ವರದಿಂದ ಮಾತ್ರ ಬಳಲುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿಯೂ ಬಳಲಿದ್ದಾರೆ ಎಂದು ತಿಳಿದುಬಂದಿದೆ.  ಆದರೆ ಈ ಸುದ್ದಿ ಬೆನ್ನಲ್ಲೇ ನೆಟ್ಟಿಗರು ಕೆಲವು ಸ್ಕ್ರೀನ್​ ಶಾಟ್​​ ಹಂಚಿಕೊಂಡು ವಿಶಾಲ್​ ಆರೋಗ್ಯದ ಕುರಿತಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.

ನಟ ವಿಶಾಲ್​ ಅವರಿಗೆ ವೈರಲ್​​ ಜ್ವರ ಬಂದಿದೆ ಇದರಿಂದ ಅವರು ವೀಕ್​​ ಆಗಿದ್ದಾರೆ ಎನ್ನಲಾಗಿದೆ. ಆದರೆ ಜ್ವರ ಬಂದರೆ ಕುತ್ತಿಗೆ ಮೇಲೆ ಯಾಕೆ ಆ ಗುರುತು ಇದೆ. ಇವರ ಈ ಪರಿಸ್ಥಿತಿಗೆ ಬೇರೆ ಎನೋ ಕಾರಣ ಇದೆ ಎಂದು ನೆಟ್ಟಿಗರು ಹಾಗೂ ಕೆಲವು ಟ್ರೋಲ್​ ಪೇಜ್​ಗಳು ಹಾಕಿಕೊಂಡಿವೆ. ಆದರೆ ಈ ಕುರಿತಾಗಿ ಸ್ವತಃ ವಿಶಾಲ್​ ಅವರೇ ಸ್ಪಷ್ಟನೆ ನೀಡಿದರೆ ಅಸಲಿ ವಿಚಾರ ತಿಳಿದು ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net