

ಬೆಂಗಳೂರು: ಕಾಂಗ್ರೆಸ್, 5 ಗ್ಯಾರಂಟಿ ಯೋಜನೆಗಳ ಆಶ್ವಾಸನೆ ನೀಡಿದ್ದರ ಬಗ್ಗೆ ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿದ್ದವು. ಈ ನಡುವೆ ಕಾಂಗ್ರೆಸ್ನ ಗ್ಯಾರಂಟಿಗಳ ಬಗ್ಗೆ ನಟ ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಜನರು ಕಾಂಗ್ರೆಸ್ ಪರ ತೀರ್ಪಿತ್ತು ಅಧಿಕಾರಕ್ಕೇರಿಸಿ ಗ್ಯಾರಂಟಿಗಳನ್ನು ಜಾರಿ ಮಾಡುವಂತೆ ನಾನಾ ರೀತಿಗಳಲ್ಲಿ ಒತ್ತಡ ಹೇರಲು ಪ್ರಾರಂಭಿಸಿದ್ದರು. ಇಂದು ಸಂಪುಟ ಸಭೆ ನಡೆಯಲಿದ್ದು ಗ್ಯಾರಂಟಿ ಯೋಜನೆಗಳ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಆಗಬೇಕಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ನಟ ವಿನೋದ್ ರಾಜ್, "ಕರೊನಾ ಟೈಮ್ನಲ್ಲಿ ಅನುಭವಿಸಿದ ಕಷ್ಟ ನಂಗೆ ಗೊತ್ತು. ಕರೊನಾ ಸಮಯದಲ್ಲಿ ರೇಟು ಸಿಗ್ತಾ ಇರಲಿಲ್ಲ. ನನಗೆ ಅಷ್ಟು ಕಷ್ಟ ಆಗಿದೆ. ದಿನಗೂಲಿ ಮಾಡೋರಿಗೆ ಎಷ್ಟು ಕಷ್ಟ ಆಗಿರಬಹುದು?
ಸಣ್ಣ ಸಣ್ಣ ಹೋಟೆಲ್ನವರಿಗೆ ತುಂಬಾ ಕಷ್ಟ ಆಗಿದ್ದು ಸಿದ್ದರಾಮಯ್ಯನವರಿಗೆ ಇದನ್ನು ಸರಿ ಮಾಡ್ಬೇಕು ಅನ್ನಿಸಿರಬೇಕು. ಅದಕ್ಕೇ ಈ ನಿರ್ಧಾರಕ್ಕೆ ಮುಂದಾಗಿರಬಹುದು" ಎಂದಿದ್ದಾರೆ.