ನಟ ವಿನೋದ್ ಕುಮಾರ್ ಶೂಟೌಟ್ ಪ್ರಕರಣ: ರಿಯಲ್ ಎಸ್ಟೇಟ್ ಉದ್ಯಮಿ ಗೋವರ್ಧನ್​ಗೆ ಜೀವಾವಧಿ

Govardhan
Published on

ಬೆಂಗಳೂರು: 2008ರಲ್ಲಿ ನಡೆದಿದ್ದ ನಟ ವಿನೋದ್ ಕುಮಾರ್ ಶೂಟೌಟ್ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಗೋವರ್ಧನ ಮೂರ್ತಿಯನ್ನು ದೋಷಿ ಎಂದು ತೀರ್ವನಿಸಿರುವ ಹೈಕೋರ್ಟ್, ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾ.ಎಸ್.ಎನ್. ಸತ್ಯನಾರಾಯಣ ಮತ್ತು ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಪೀಠ ಶುಕ್ರವಾರ ಮಾನ್ಯ ಮಾಡಿದೆ. ಗೋವರ್ಧನಮೂರ್ತಿಯೇ ವಿನೋದ್​ಗೆ ಗುಂಡಿಕ್ಕಿ ಕೊಲೆ ಮಾಡಿರುವುದಕ್ಕೆ ಪೂರಕ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್ ಒದಗಿಸಿದೆ ಎಂದು ಹೈಕೋರ್ಟ್ ತನ್ನ 237 ಪುಟಗಳ ತೀರ್ಪಿನಲ್ಲಿ ಹೇಳಿದೆ. ದಂಡ ಮೊತ್ತದಲ್ಲಿ 4.5 ಲಕ್ಷ ರೂ.ಗಳನ್ನು ಮೃತನ ತಾಯಿಗೆ ಪಾವತಿಸಬೇಕು. ಉಳಿದ ಹಣವನ್ನು ಸರ್ಕಾರಕ್ಕೆ ಪಾವತಿಸಲು ಸೂಚಿಸಿದೆ. ಬಾಗಲೂರಿನ ಫಾಮರ್್​ಹೌಸ್​ನಲ್ಲಿ 2008ರ ಅ.7ರಂದು ಗೋವರ್ಧನ ಮೂರ್ತಿ ಏರ್ಪಡಿಸಿದ್ದ ಔತಣಕೂಟದಲ್ಲಿ ವಿನೋದ್ ಕುಮಾರ್​ಗೆ ಗೋವರ್ಧನಮೂರ್ತಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

ತೀರ್ಪಿನ ಪ್ರಮುಖ ಅಂಶಗಳಿವು

  • ಆರೋಪಿ 15 ದಿನ ಕೇರಳದಲ್ಲಿ ತಲೆಮರೆಸಿಕೊಂಡಿದ್ದು, ಕೊಲೆಯನ್ನು ಪುಷ್ಟೀಕರಿಸುತ್ತದೆ.
  • ಗೋವರ್ಧನಮೂರ್ತಿಯ ಪರವಾನಗಿ ಹೊಂದಿದ್ದ ಗನ್ ನಿಂದಲೇ ಗುಂಡು ಹಾರಿದೆ.
  • ಗನ್​ನ ಗುಂಡು, ವಿನೋದ್ ಮೃತದೇಹದಲ್ಲಿ ದೊರೆತ ಗುಂಡು ಒಂದೇ ಆಗಿದೆ.
  • ಗೋವರ್ಧನಮೂರ್ತಿ ವಿರುದ್ಧ ವಿನೋದ್ ಸಹ ಮರಣಪೂರ್ವ ಹೇಳಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net