ಈ ನಟ ಸಾಲ ತೀರಿಸಲು ಮೋಟರ್​ ಸೈಕಲ್​ ಕಳ್ಳನಾದ!

juvinile crime
Published on

ಮುಂಬೈ: ಮರಾಠಿ ಧಾರಾವಾಹಿಗಳಲ್ಲಿ ನಟನಾಗಿ ಕೆಲಸ ಮಾಡುತ್ತಿರುವ 30 ವರ್ಷದ ಜೂನಿಯರ್ ಕಲಾವಿದನನ್ನು ಮುಂಬೈನಲ್ಲಿ ಮೋಟಾರು ಬೈಕ್‌ಗಳನ್ನು ಕದ್ದ ಆರೋಪದ ಮೇಲೆ ನವಘರ್ ಪೊಲೀಸರು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುನಿಲ್ ಚೌಧರಿ ಎಂಬಾತ ಸಾಲದ ಸುಳಿಗೆ ಸಿಲುಕಿ ಸಾಲ ತೀರಿಸುವ ಸಲುವಾಗಿ ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನಿಂದ ಒಟ್ಟು 23 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

'ಚೌಧರಿ ಅವರು ಟಿವಿ ಧಾರಾವಾಹಿಗಳನ್ನು ಹೊರತುಪಡಿಸಿ ದೈನಂದಿನ ವೇತನದ ಆಧಾರದ ಮೇಲೆ ಕೆಲವು ವೆಬ್ ಸರಣಿಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಾರೆ. ಆದರೂ ಕಡಿಮೆ ವೇತನದ ಕಾರಣ ಆತ ದೈನಂದಿನ ಅಗತ್ಯಗಳನ್ನು ಪೂರೈಸಲು ಸಾಲ ಮಾಡಲು ಪ್ರಾರಂಭಿಸಿದ್ದಾನೆ. ನಂತರ ತನ್ನ ಸಾಲವನ್ನು ತೀರಿಸಲು ಸಾಧ್ಯವಾಗದ ಕಾರಣ, ಸುನಿಲ್​ ಚೌಧರಿ ಬೈಕ್‌ಗಳನ್ನು ಕದಿಯಲು ಪ್ರಾರಂಭಿಸಿದ್ದಾನೆ'ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ

"ನಮ್ಮ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಲು ಪ್ರಾರಂಭಿಸಿದಾಗ, ನಾವು ಸಿಸಿಟಿವಿ ದೃಶ್ಯಗಳು ಮತ್ತು ಗುಪ್ತಚರ ವಿಭಾಗದಿಂದ ಪಡೆದ ಲೀಡ್‌ಗಳ ಆಧಾರದ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದ್ದೆವು. ಅದಾದ ನಂತರ ಸುನಿಲ್​ ಚೌಧರಿ ಅವರನ್ನು ಬದ್ಲಾಪುರದ ಅವರ ಮನೆಯಲ್ಲಿ ಪತ್ತೆಹಚ್ಚಿ ಬಂಧಿಸಲಾಯಿತು" ಎಂದು ಅಧಿಕಾರಿಯೊಬ್ಬರು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net