‘ಲಕ್ಷ್ಮಿ ಟಿಫನ್ ರೂಮ್’ ಸೀರಿಯಲ್‌ ಮೂಲಕ ಕಿರತೆರೆಗೆ ಬಣ್ಣ ಹಚ್ಚಿದ ನಟ ಟೆನ್ನಿಸ್ ಕೃಷ್ಣ

tenniskrishna
Published on

ಬೆಂಗಳೂರು:  ಸ್ಯಾಂಡಲ್‌ವುಡ್‌ನ ಖ್ಯಾತ ನಟ ಟೆನ್ನಿಸ್ ಕೃಷ್ಣ ಅವರು ಒಂದು ಕಾಲದಲ್ಲಿ ಕಾಮಿಡಿಗೆ ಬಹುಬೇಡಿಕೆ ಇದ್ದ ನಟ. ಈಗ ‘ಲಕ್ಷ್ಮಿ ಟಿಫನ್ ರೂಮ್’ ಸೀರಿಯಲ್‌ಗೆ ನಟ ಟೆನ್ನಿಸ್ ಕೃಷ್ಣ ಬಣ್ಣ ಹಚ್ಚಿದ್ದಾರೆ.

ಕನ್ನಡದ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ೬00ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ರೇಖಾ ದಾಸ್ ಮತ್ತು ಟೆನ್ನಿಸ್ ಕೃಷ್ಣ ಅವರ ಕಾಂಬಿನೇಷನ್ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅವರೊಂದಿಗೆ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜೊತೆಯಾಗಿ ಟೆನ್ನಿಸ್ ಕೃಷ್ಣ ನಟಿಸಿದ್ದಾರೆ.ಕಿರುತೆರೆಗೆ ಹೊಸ ಧಾರಾವಾಹಿ ‘ಲಕ್ಷ್ಮಿ ಟಿಫನ್ ರೂಮ್’ ಪ್ರಾಜೆಕ್ಟ್‌ನಲ್ಲಿ ಬಹುಮುಖ್ಯ ಪಾತ್ರಕ್ಕೆ ಟೆನ್ನಿಸ್ ಕೃಷ್ಣ ಬಣ್ಣ ಹಚ್ಚಿದ್ದಾರೆ.

ಅವರ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಅಲೆಯ ವಿನೂತನ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ.

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ . ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಖ್ಯಾತಿ ಟೆನ್ನಿಸ್ ಕೃಷ್ಣ ಅವರದ್ದು. ಕಾಮಿಡಿ ಕಚಗುಳಿ ಇಡುವುದರಲ್ಲಿ ಟೆನ್ನಿಸ್ ಕೃಷ್ಣ ಎತ್ತಿದ ಕೈ. ಹಲವಾರು ಹಿಟ್ ಸಿನಿಮಾಗಳಲ್ಲಿ ಹಾಸ್ಯದ ಹೊಳೆಯನ್ನೇ ಹರಿಸಿರುವ ಟೆನ್ನಿಸ್ ಕೃಷ್ಣ.

ಟೆನ್ನಿಸ್ ಕೃಷ್ಣ ಎಂದ ಕೂಡಲೆ.. ಕನ್ನಡ ಸಿನಿಪ್ರಿಯರಿಗೆ ಥಟ್ ಅಂತ ನೆನಪಾಗುವ ಡೈಲಾಗ್ - ‘’ಇನ್ನೂ ಬೆಲ್ಲು ಹೊಡೀಲಿಲ್ಲವೇ..?’’. ಅಷ್ಟರಮಟ್ಟಿಗೆ ‘ಗಡಿಬಿಡಿ ಅಳಿಯ’ ಚಿತ್ರದಲ್ಲಿನ ಟೆನ್ನಿಸ್ ಕೃಷ್ಣ ಅವರ ಕಾಮಿಡಿ ಸಿನಿಪ್ರಿಯರ ನೆನಪಿನಲ್ಲಿ ಅಚ್ಚಾಗಿದೆ. ಚಿತ್ರರಂಗಕ್ಕೆ ಕಾಲಿಡುವ ಮುನ್ನ ಟೆನ್ನಿಸ್ ಕೃಷ್ಣ ಅವರು ‘ಟೆನ್ನಿಸ್’ ಕೋಚ್ ಆಗಿದ್ದರು. ಈ ಕಾರಣದಿಂದ ‘ಕೃಷ್ಣ’ ಎಂಬ ಅವರ ಹೆಸರಿನೊಂದಿಗೆ ‘ಟೆನ್ನಿಸ್’ ಕೂಡ ಸೇರಿಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net