'ಸೂರ್ಯ 43' ಟೈಟಲ್​ ಅಧಿಕೃತ?; ಇಲ್ಲಿದೆ ಹೊಸ ಅಪ್ಡೇಟ್​

Untitled design - 2023-10-26T131748.622
Published on

ತಮಿಳುನಾಡು: ತಮಿಳು ಚಿತ್ರರಂಗದ ಸ್ಟಾರ್​ ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ 'ಕಂಗುವಾ' ಚಿತ್ರ ಸದ್ಯ ಚಿತ್ರೀಕರಣ ಹಂತದಲ್ಲಿದ್ದು, ಸಿನಿಮಾ ಕುರಿತಂತೆ ಅವರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳು ಮೂಡಿವೆ.

ಈ ಮಧ್ಯೆ ಸೂರ್ಯ ಅವರ ಮುಂದಿನ ಚಿತ್ರಕ್ಕೆ 'ಸೂರ್ಯ 43' ಎಂಬ ಶೀರ್ಷಿಕೆಯನ್ನು ಈ ಹಿಂದೆಯೇ ತಾತ್ಕಾಲಿಕವಾಗಿ ಘೋಷಣೆ ಮಾಡಲಾಗಿತ್ತು. ಈ ಸಂಗತಿ ಇಂದು ಸಂಜೆ 4 ಗಂಟೆಗೆ ಚಿತ್ರ ತಯಾರಕರು ಪ್ರಕಟಿಸಲಿರುವ ಹೊಸ ಅಪ್ಟೇಟ್​ ಮೂಲಕ ದೃಢವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಯಶಸ್ವಿ ನಿರ್ದೇಶಕಿ ಸುಧಾ ಕೊಂಗರ ತಮ್ಮ ಹಿಂದಿನ ಚಿತ್ರಗಳ ಸಕ್ಸಸ್​​ ಬೆನ್ನಲ್ಲೇ ಈ ಸಿನಿಮಾವನ್ನು ನಿರ್ದೇಶಿಸಲು ಮುಂದಾಗಿದ್ದಾರೆ. ನಟ ಸೂರ್ಯ ಅವರೊಡನೆ ಕೈಜೋಡಿಸುವ ಮುಖೇನ ಬಿಗ್ ಬಜೆಟ್​ ಚಿತ್ರವಾಗಿ ಬೆಳ್ಳಿ ಪರದೆಯ ಮೇಲೆ ತರಲು ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ.

ಸಿನಿಮಾ ಕುರಿತಂತೆ ಇಂದು (ಅ.26) ಸಂಜೆ 4 ಗಂಟೆಗೆ ಕುತೂಹಲಕಾರಿ ಹಾಗೂ ಮಹತ್ವದ ಸಂಗತಿಯೊಂದನ್ನು ಅನಾವರಣಗೊಳಿಸಲಾಗುವುದು ಎಂದು ಚಿತ್ರತಂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿಕೊಂಡಿದೆ. ನೆಟ್ಟಿಗರು ಮತ್ತು ಅಭಿಮಾನಿಗಳು ಊಹೆಯಂತೆ 'ಸೂರ್ಯ 43' ಟೈಟಲ್​ ಅಧಿಕೃತವಾಗಲಿದೆ ಅಥವಾ ಹೊಸ ಶೀರ್ಷಿಕೆಯನ್ನು ಚಿತ್ರ ತಯಾರಕರು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಚಿತ್ರದಲ್ಲಿ ಸೂರ್ಯ, ದುಲ್ಕರ್ ಸಲ್ಮಾನ್, ನಜ್ರಿಯಾ ಫಹದ್, ವಿಜಯ್ ವರ್ಮಾ, ಮಾಧವನ್, ಅದಿತಿ ಶಂಕರ್​ ಸೇರಿದಂತೆ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ 2ಡಿ ಎಂಟರ್‌ಟೈನ್‌ಮೆಂಟ್ ಬಂಡವಾಳ ಹೂಡುತ್ತಿದ್ದು, ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net