

ಬೆಂಗಳೂರು: ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಜ್ಯೋತಿಕಾ ಪತಿ ಸೂರ್ಯ ಜತೆ ವರ್ಕೌಟ್ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ.
ಕಾಲಿವುಡ್ನ ಸ್ಟಾರ್ ನಟಿ ಜ್ಯೋತಿಕಾ ಮತ್ತು ಸೂರ್ಯ ಒಟ್ಟಿಗೆ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿರುವುದು ಕಂಡುಬಂದಿದೆ. ಜ್ಯೋತಿಕಾ ಅವರಿಗೆ 44 ವರ್ಷ ವಯಸ್ಸು. ಇಬ್ಬರು ಮಕ್ಕಳ ಅಮ್ಮನಾದ ಮೇಲೂ ಜ್ಯೋತಿಕಾ ಫಿಟ್ ಆಗಿದ್ದಾರೆ.
ಹಿಂದಿನ ಬಾರಿ ಜ್ಯೋತಿಕಾ ವರ್ಕೌಟ್ಗೆ ಸೂರ್ಯ ಅವರು ಪತಿ ಸೂರ್ಯ ʻʻಮೈ ವಂಡರ್ ವುಮೆನ್ʼʼಎಂದು ಇನ್ಸ್ಟಾ ಸ್ಟೋರಿಯಲ್ಲಿ ರಿ ಪೋಸ್ಟ್ ಮಾಡಿಕೊಂಡಿದ್ದರು. ಈಗ ಮತ್ತೊಂದು ಬಾರಿ ನಟಿಯ ಫಿಟ್ನೆಸ್ ವಿಡಿಯೊ ವೈರಲ್ ಆಗಿದೆ.
ಬಹುಭಾಷಾ ನಟಿ ಜ್ಯೋತಿಕಾ ಅವರು ಈಗಾಗಲೇ ಕನ್ನಡದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಅವರು ಬಣ್ಣ ಹಚ್ಚಿದ್ದು ಉಪೇಂದ್ರ ನಟನೆಯ 'ನಾಗರಹಾವು' ಚಿತ್ರದಲ್ಲಿ. ಆನಂತರ ಪ್ರಭುದೇವ ಸಹೋದರರ ಬಹುಭಾಷಾ ಸಿನಿಮಾ '1 2 3' ಯಲ್ಲೂ ನಟಿಸಿದ್ದರು. ಆ ಬಳಿಕ ಅವರು ಕನ್ನಡದತ್ತ ಮುಖ ಮಾಡಿಲ್ಲ.ನಟ ಸೂರ್ಯ ಅವರನ್ನು ಮದುವೆಯಾದ ಮೇಲೆ ನಟಿ ಜ್ಯೋತಿಕಾ ಅವರು ಸಿನಿಮಾಗಳಿಂದ ಗ್ಯಾಪ್ ಪಡೆದುಕೊಂಡಿದ್ದರು. ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ ದಂಪತಿಗೆ ಇಬ್ಬರು ಮಕ್ಕಳು. ಮಗಳು ದಿಯಾ (15 ವರ್ಷ) ಮಗ ದೇವ್ (12 ವರ್ಷ).
ಜ್ಯೋತಿಕಾ ಅವರು ʻಶೈತಾನ್; ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಸೂರ್ಯ ಅವರು ನಿರ್ದೇಶಕ ಸಿರುತೈ ಶಿವ ಅವರ ‘ಕಂಗುವ’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಏಪ್ರಿಲ್ 5ರಂದು ಥಿಯೇಟರ್ಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಲಿದೆ.