ಶಾರುಖ್ ಖಾನ್​ಗೆ 60 ರ ಸಂಭ್ರಮ, ಮತ್ತೆ ಚಿತ್ರಮಂದಿರದಲ್ಲಿ ಬರಲಿವೆ ಈ 7 ಚಿತ್ರಗಳು Shah Rukh Khan

Shahrukh Khan 1
Published on

ಮುಂಬೈ : ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖ್​ ಖಾನ್​  (Shah Rukh Khan) ಅವರ 60 ನೇ ಹುಟ್ಟು ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಅಭಿಮಾನಿಗಳ ಉತ್ಸಾಹವು ಉತ್ತುಂಗಕ್ಕೆ ಏರಿದೆ ಎಂದರೆ ತಪ್ಪಾಗದು.

ಸಾಮಾಜಿಕ ಮಾಧ್ಯಮಗಳು ಈಗಾಗಲೇ ಹೃತ್ಪೂರ್ವಕ ಗೌರವಗಳು, ಹಳೆಯ ನೆನಪಿನ ಪೋಸ್ಟ್​ಗಳು ಹಾಗೂ ಇನ್ನಿತರ ಹೃದಯೀಸ್ಪರ್ಶಿ ಸಂದೇಶಗಳಿಂದ ತುಂಬಿವೆ. ಈ ಸಂತೋಷದ ಗಳಿಗೆಗೆ ಶಾರುಖ್​ಖಾನ್​ ಅವರ ಆರು ದಶಕಗಳ ಮೈಲಿಗಲ್ಲನ್ನು ಗುರುತಿಸಲು ಪಿವಿಆರ್ ಸಿನಿಮಾಸ್ ಆಯೋಜಿಸಿರುವ ವಿಶೇಷ ಚಲನಚಿತ್ರೋತ್ಸವದ ಘೋಷಣೆಯು ಅಭಿಮಾನಿಗಳ ಉತ್ಸಾಹಕ್ಕೆ ಮತ್ತಷ್ಟು ಮೆರಗನ್ನು ನೀಡಿದೆ.

ಅಕ್ಟೋಬರ್ 31 ರಂದು ಪ್ರಾರಂಭವಾಗಲಿರುವ ಈ ಉತ್ಸವದಲ್ಲಿ, ಅವರ ನಟನೆಯ ಕೆಲವು ಅಪ್ರತಿಮ ಚಲನಚಿತ್ರಗಳು ಭಾರತದಾದ್ಯಂತ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಪ್ರಸಾರವಾಗಲಿವೆ. ಇದು ಪ್ರೇಕ್ಷಕರಿಗೆ ಸ್ಮರಣೀಯ ಸಿನಿಮೀಯ ಕ್ಷಣಗಳನ್ನು ಮೆಲಕು ಹಾಕಲು ಅವಕಾಶ ನೀಡಿದೆ ಎಂದು ತಿಳಿದುಬಂದಿದೆ.

ಈ ಹುಟ್ಟು ಹಬ್ಬವನ್ನು ತಮಗೆ ಅರ್ಪಿಸುತ್ತಿರುವುದಕ್ಕೆ ಅಭಿಮಾನಿಗಳು ಮಾತ್ರ ಬೆರಗುಗೊಳ್ಳುವುದಲ್ಲದೇ, ಸ್ವತಃ ಶಾರುಖ್​ ಕೂಡಾ ರೋಮಾಂಚನಗೊಂಡಿದ್ದಾರೆ. ಇವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಹಳೆಯ ಭಾವನೆಗಳನ್ನು ಮೂಡಿಸುವ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ.

ಫೋಸ್ಟ್​ನಲ್ಲೇನಿದೆ?

ನನ್ನ ಹಿಂದಿನ ಕೆಲವು ಚಿತ್ರಗಳು ಮತ್ತೆ ಚಿತ್ರಮಂದಿರಗಳಿಗೆ ಬರುತ್ತಿವೆ. ಅವುಗಳಲ್ಲಿರುವ ವ್ಯಕ್ತಿ ಹೆಚ್ಚು ಬದಲಾಗಿಲ್ಲ. ಕೂದಲು ಮಾತ್ರ... ಮತ್ತು ಸ್ವಲ್ಪ ಹೆಚ್ಚು ಸುಂದರವಾಗಿವೆ.

ಭಾರತದಾದ್ಯಂತ ಆಯ್ದ ಆಯ್ದ ಚಿತ್ರಮಂದಿರಗಳಲ್ಲಿ, PVR INOX ಸಹಯೋಗದೊಂದಿಗೆ ಶಾರುಖ್​ ಖಾನ್​ ಚಲನಚಿತ್ರೋತ್ಸವವು ಅಕ್ಟೋಬರ್​ 31 ರಂದು ಪ್ರಾರಂಭವಾಗುತ್ತವೆ. ಇದು ಮಧ್ಯಪ್ರಾಚ್ಯ, ಉತ್ತರ ಅಮೆರಿಕಾ, ಯುಕೆ, ಯುರೋಪ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಾದ್ಯಂತ YRF ಅಂತರರಾಷ್ಟ್ರೀಯ ಬಿಡುಗಡೆಯಾಗಲಿದ್ದು, ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ ಎಂದು ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಹಾರ ಪದ್ಧತಿ ಕುರಿತು ಕ್ರೀಡಾಪಟುಗಳಿಗೆ ಜಾಗೃತಿ: ಪಿಇಟಿ ಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮ ಅಕ್ಟೋಬರ್ 31 ರಿಂದ ಪ್ರಾರಂಭವಾಗುವ 2 ವಾರಗಳ ಈ ಕಾರ್ಯಕ್ರಮವು 30ಕ್ಕೂ ಹೆಚ್ಚು ನಗರಗಳು ಹಾಗೂ 75ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡುತ್ತಿವೆ. ಈ ವೇಳೆ ಖಾನ್​ ಅವರ ಏಳು ಅತ್ಯಂತ ಪ್ರತಿಷ್ಟಿತ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ.

7 ಚಲನಚಿತ್ರಗಳು ಯಾವುವು?

ಚೆನ್ನೈ ಎಕ್ಸ್‌ಪ್ರೆಸ್, ದೇವದಾಸ್‌, ದಿಲ್ ಸೇ, ಜವಾನ್‌, ಕಭಿ ಹಾಂ ಕಭಿ ನಾ, ಮೈ ಹೂ ನಾ, ಮತ್ತು ಓಂ ಶಾಂತಿ ಓಂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net