ನಟ ರಣಧೀರ್ ಕಪೂರ್​ಗೆ ಕರೊನಾ

randhir
Published on

ಮುಂಬೈ : ಬಾಲಿವುಡ್​ನ ಹಿರಿಯ ನಟ ರಣಧೀರ್ ಕಪೂರ್ ಅವರಿಗೆ ಕರೊನಾ ಸೋಂಕು ತಗುಲಿದೆ. 74 ವರ್ಷ ವಯಸ್ಸಿನ ಕಪೂರ್​, ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎನ್ನಲಾಗಿದೆ.

"ರಣಧೀರ್​ ಅವರು ನಿನ್ನೆ ರಾತ್ರಿ ಕರೊನಾ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರು ಸ್ಟೇಬಲ್ ಆಗಿದ್ದಾರೆ. ಚಿಂತೆ ಮಾಡುವ ಅಗತ್ಯ ಇಲ್ಲ" ಎಂದು ಅವರ ಚಿಕಿತ್ಸೆ ಮಾಡುತ್ತಿರುವ ಡಾ. ಸಂತೋಷ್​ ಶೆಟ್ಟಿ ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ.

ಸಿನಿಮಾ ಕ್ಷೇತ್ರದ ದಿಗ್ಗಜ ದಿವಂಗತ ರಾಜ್​ ಕಪೂರ್​ ಅವರ ಹಿರಿಯ ಪುತ್ರರಾದ ರಣಧೀರ್ ಕಪೂರ್​, ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಮತ್ತು ಕರಿಷ್ಮಾ ಕಪೂರ್​ ಅವರ ತಂದೆಯಾಗಿದ್ದಾರೆ. ಕಳೆದ ವರ್ಷ ಏಪ್ರಿಲ್ 30 ರಂದು ರಣಧೀರ್​ ಅವರ ತಮ್ಮ ನಟ ರಿಷಿ ಕಪೂರ್ ಕ್ಯಾನ್ಸರ್​ ರೋಗದಿಂದ ನಿಧನರಾಗಿದ್ದರು. ಈ ಫೆಬ್ರವರಿಯಲ್ಲಿ ಮತ್ತೊಬ್ಬ ತಮ್ಮ ರಾಜೀವ್ ಕಪೂರ್ ಹೃದಯಾಘಾತದಿಂದ ನಿಧನಗೊಂಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net