ನಟ ರಾಮ್ ಕಪೂರ್ ಹೊಸ ಕಾರು - ಪಾರ್ಶೆ 911 ಕಾರ್ರೆರಾ ಎಸ್​!

porsche
Published on

ಮುಂಬೈ : ಟೆಲಿವಿಷನ್ ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ನಟ ರಾಮ್​ ಕಪೂರ್ ನವನವೀನ ಕಾರುಗಳನ್ನು ಕೊಳ್ಳುವುದಕ್ಕೆ ಹೆಸರಾಗಿದ್ದಾರೆ. ಅವರು ಇತ್ತೀಚೆಗೆ ತಮ್ಮ ಗ್ಯಾರೇಜಿಗೆ ಸೇರಿಸಿಕೊಂಡ ವಾಹನ ಯಾವುದು ಗೊತ್ತೆ? 1.84 ಕೋಟಿ ರೂ.ಗಳ ಶೋರೂಂ ಬೆಲೆಯುಳ್ಳ ಪಾರ್ಶೆ​ 911 ಕಾರ್ರೆರಾ ಎಸ್​!

ಪಾರ್ಶೆ ಸೆಂಟರ್​ ಮುಂಬೈನಿಂದ ರಾಮ್​ ಕಪೂರ್​ ದಂಪತಿ ಹೊಸ ಕಾರಿನ ಡೆಲಿವರಿ ಪಡೆದ ಫೋಟೊವನ್ನು ಕಂಪೆನಿ ತನ್ನ ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದೆ. ಅವರು ಖರೀದಿಸಿರುವ ಜೆಂಟಿಯನ್ ಬ್ಲೂ ಮೆಟಾಲಿಕ್​ ಪೇಂಟ್​ ಹೊಂದಿದ ಟೂ-ಡೋರ್ ಕೂಪ್​ ಆಕರ್ಷಕವಾಗಿದೆ.

ಪಾರ್ಶೆ​ 911 ಕಾರ್ರೆರಾ ಎಸ್​ ಮಾಡೆಲ್​ ಭಾರತದಲ್ಲಿ ಮೂರು ವಿಧಗಳಲ್ಲಿ ಬರುತ್ತದೆ - ಕೂಪ್, ಕಾಬ್ರಿಯೋಲೆಟ್ ಮತ್ತು ಟರ್ಗಾ. 3.0-ಲೀಟರ್​-6-ಸಿಲಿಂಡರ್​ ಹೊಂದಿದ, ಹಿಂಭಾಗದಲ್ಲಿ ಅಳವಡಿಸಲಾದ ಟರ್ಬೋಚಾರ್ಜಡ್​ ಇಂಜಿನ್​ನೊಂದಿಗೆ ಬರುವ ಈ ಮಾಡೆಲ್​ನಲ್ಲಿ ಮೋಟಾರಿಗೆ 8-ಸ್ಪೀಡ್​ ಆಟೋಮೆಟಿಕ್ ಟ್ರಾನ್ಸ್​ಮಿಷಿನ್ ಸೌಲಭ್ಯವಿದೆ. ಸೊನ್ನೆಯಿಂದ 100 ಕಿಲೋಮೀಟರ್​ ಪರ್ ಅವರ್ ವೇಗವನ್ನು 3.7 ಸೆಕೆಂಡುಗಳಲ್ಲಿ ಈ ಕಾರು ಸಾಧಿಸಬಲ್ಲದು. 306 ಕಿಲೋಮೀಟರ್​ ಪರ್ ಅವರ್ ವೇಗದವರೆಗೆ ಓಡಬಲ್ಲದು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net