ಖ್ಯಾತ ಖಳ ನಟ ರಘುವರನ್ ಮಗ ಹೇಗಿದ್ದಾನೆ ನೋಡಿದ್ದೀರಾ?

raghuvaran (1)
Published on

ಬೆಂಗಳೂರು: 80-90ರ ದಶಕದಲ್ಲಿ ಸೌತ್ ಇಂಡಸ್ಟ್ರಿಯಲ್ಲಿ ಟಾಪ್ ಮೋಸ್ಟ್ ವಿಲನ್ ಎಂದು ಹೆಸರು ಮಾಡಿದ್ದರು. ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸಿದ್ದರು. ಕನ್ನಡ, ತೆಲಗು, ತಮಿಳು ಸಿನಿಮಾದಲ್ಲಿ ನಟಿಸಿದ್ದ ನಟ ರಘುವರನ್. ರವಿಚಂದ್ರನ್​​, ಶಿವರಾಜ್​ಕುಮಾರ್​ ಹೀಗೆ  ಮುಂತಾದ ಹೀರೋಗಳಿಗೆ ಸರಿಸಮಾನವಾಗಿ ಅಭಿಮಾನಿಗಳನ್ನು ಗಳಿಸಿಕೊಂಡರು.

ಸಿನಿಮಾಗಳಲ್ಲಿ ವಿಲನ್​ ಮಾತ್ರವದಲ್ಲದೆ ತಂದೆ ಮತ್ತು ಅಣ್ಣನ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಸುಸ್ವಾಗತಂ ಚಿತ್ರದಲ್ಲಿ ನಾಯಕನ ತಂದೆಯಾಗಿ ನಟಿಸಿ ಪ್ರೇಕ್ಷಕರಿಗೆ ಹತ್ತಿರವಾದರು. ಅವರು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅವರ ಅಸಾಧಾರಣ ಅಭಿನಯದಿಂದ ಪ್ರಭಾವಿತರಾಗಿದ್ದರು. ನಟನಾಗಿ ಚಿತ್ರರಂಗವನ್ನು ಬೆಳಗಿದ ರಘುವರನ್ ಅವರು 2008 ರಲ್ಲಿ ತಮ್ಮ 50 ನೇ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಯಿಂದ ಹಠಾತ್ ನಿಧನರಾದರು. ಸಿನಿಮಾಗಳಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ರಘುವರನ್ ನಿಜ ಜೀವನದಲ್ಲಿ ಹಲವು ಏಳುಬೀಳುಗಳನ್ನು ಎದುರಿಸಿದ್ದಾರೆ.

ರಘುವರನ್ 1996 ರಲ್ಲಿ ಸಹ ನಟಿ ರೋಹಿಣಿ ಮೊಲ್ಲೇಟಿ ಅವರನ್ನು ವಿವಾಹವಾದರು. 1998 ರಲ್ಲಿ ಅವರಿಗೆ ರಿಶಿವರನ್ ಎಂಬ ಮಗನಿದ್ದನು. ದಾಂಪತ್ಯ ಜೀವನದಲ್ಲಿ ತುಂಬಾ ಆತ್ಮೀಯರಾಗಿದ್ದ ಈ ಜೋಡಿ 2004ರಲ್ಲಿ ಮನಸ್ತಾಪದಿಂದ ವಿಚ್ಛೇದನ ಪಡೆದಿದ್ದರು. ಅವರ ಅಗಲಿಕೆಯ ನಂತರ ರಿಷಿವರನ್ ಅವರ ತಾಯಿಯ ಜತೆ ಬೆಳೆದರು. ಸದ್ಯ ರಿಶಿವರನ್ ಅವರ ಫೋಟೋಗಳು ವೈರಲ್​​ ಆಗುತ್ತಿವೆ.

ಎತ್ತರ ಹಾಗೂ ಸ್ಟೈಲ್ ನಲ್ಲಿ ರಿಶಿವರನ್ ತಂದೆಯಂತೆ ಕಾಣುತ್ತಿದ್ದಾರೆ ಎಂದು ನೆಟಿಜನ್ ಗಳು ಕಮೆಂಟ್ ಮಾಡುತ್ತಿದ್ದಾರೆ. ರಿಷಿವರನ್ ತನ್ನ ತಂದೆ ತಾಯಿಯಂತೆ ನಟನಾಗಿ ಚಿತ್ರರಂಗಕ್ಕೆ ಬಂದಿಲ್ಲ. ಅವರಿಗೆ ಸಂಗೀತದಲ್ಲಿ ಹೆಚ್ಚು ಆಸಕ್ತಿ. ಅವರು ಈಗಾಗಲೇ ಇಂಗ್ಲಿಷ್ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. ಫಾದರ್ ಸನ್ ಬ್ಯಾರಿನ್ ಆಲ್ಬಂ ದೊಡ್ಡ ಹಿಟ್ ಆಗಿತ್ತು.

ಆರಂಭದಲ್ಲಿ ರಘುವರನ್ ಕೂಡ ಸಂಗೀತದತ್ತ ಆಕರ್ಷಿತರಾದರು. ಆ ನಂತರ ಅವರು ಸೌತ್ ಇಂಡಸ್ಟ್ರಿಯ ಅದ್ಭುತ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಇದೀಗ ರಘುವರನ್ ಪುತ್ರನಿಗೂ ಸಂಗೀತದತ್ತ ಒಲವು ಮೂಡಿದೆ. ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿದ್ದ ರಘುವನ್ 2008ರಲ್ಲಿ ವಿಪರೀತ ಕುಡಿತದಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ರಘುವರನ್ ಅವರು ಸುಸ್ವಾಗತಂ, ಆಹಾ, ಶಿವ, ನಾಗ, ಜಾನಿ, ಮಾಸ್ ಮುಂತಾದ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net