ನಟ ಪುನೀತ್‌ ಜನಮನದಲ್ಲಿ ಶಾಶ್ವತ

skp puneeth
ಶಿಕಾರಿಪುರದಲ್ಲಿ ಆಯೋಜಿಸಿದ್ದ ನಟ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಇ.ಎಚ್.ಬಸವರಾಜ್, ವೈಭವ್ ಬಸವರಾಜ್, ರಾಜ್‌ಕುಮಾರ್ ಇತರರಿದ್ದರು.
Published on

ಶಿಕಾರಿಪುರ: ಮನುಷ್ಯ ಯಾವತ್ತೂ ಜನಮನದಲ್ಲಿ ಚಿರಸ್ಥಾಯಿಯಾಗಿ ಇರುವುದು ಅವನಿಗಿರುವ ಸಾಮಾಜಿಕ ಕಳಕಳಿ, ಒಳ್ಳೆಯ ಗುಣಗಳಿಂದ. ಇದಕ್ಕೆ ನಟ ದಿ. ಪುನೀತ್ ರಾಜ್‌ಕುಮಾರ್ ಉದಾಹರಣೆ ಎಂದು ಅಭಿಮಾನಿ ಬಳಗದ ಸಂಚಾಲಕ ಇ.ಎಚ್.ಬಸವರಾಜ್ ಹೇಳಿದರು.

ಬಸ್ ನಿಲ್ದಾಣ ಪಕ್ಕದ ಪುನೀತ್ ರಾಜ್‌ಕುಮಾರ್ ರಸ್ತೆಯ ನಾಮಫಲಕಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಪುನೀತ್ ರಾಜ್‌ಕುಮಾರ್ ಕೇವಲ ನಟರಾಗಷ್ಟೇ ಇರಲಿಲ್ಲ. ವೃದ್ಧಾಶ್ರಮ, ಸರ್ಕಾರಿ, ಶಾಲೆಗಳು, ಅನಾಥಶ್ರಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದವರು ಎಂದರು.

ತಂದೆ ಡಾ. ರಾಜ್‌ಕುಮಾರ್ ಅವರಿಗಿಂತ ಭಿನ್ನವಾಗಿ ಬೆಳೆದರು. ಯಾವುದೇ ರೀತಿಯ ಅಹಂಕಾರದ ಅಂಗಳಕ್ಕೆ ಜಾರದೆ ಒಬ್ಬ ಸಹೃದಯಿ ನಟನಾಗಿ ಬಾಳಿದರು. ಸಮಾಜದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿ ಮಿಂಚಿ ಮರೆಯಾದರು ಎಂದು ಸ್ಮರಿಸಿದರು.

ಪುಣ್ಯಸ್ಮರಣೆ ನಿಮಿತ್ತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ವೈಭವ್ ಬಸವರಾಜ್, ರಾಜ್‌ಕುಮಾರ್, ಧನರಾಜ್, ವಿಠ್ಠಲ ಮಹೇಂದ್ರಕರ್, ಸುಬ್ರಹ್ಮಣ್ಯ, ಪ್ರದೀಪ್, ಸುದರ್ಶನ್, ಸಲೀಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net