ಪೋರ್ನ್​ ವಿಡಿಯೋ ಚಿತ್ರೀಕರಣ: ಪೂನಂ ಪಾಂಡೆ ದಂಪತಿ ಬಂಧನ!

5Goa1
Published on

ಪಣಜಿ: ಕಾಣಕೋಣದ ಚಾಪೋಲಿ ಅಣೆಕಟ್ಟೆಯ ಪ್ರದೇಶದಲ್ಲಿ ಪೋರ್ನ್ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ರೂಪದರ್ಶಿ ಪೂನಂ ಪಾಂಡೆ ಹಾಗೂ ಸ್ಯಾಮ್ ಬಾಂಬೆಯನ್ನು ಗುರುವಾರ ಬಂಧಿಸಲಾಗಿದೆ. ಜತೆಗೆ, ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಸಿಕೇರಿಯ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದ ಇವರನ್ನು ಕಲಂಗೂಟ್ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಪ್ರದೇಶದಲ್ಲಿ ಪೂನಂ ಪಾಂಡೆ ಪೋರ್ನ್ ವಿಡಿಯೋಕ್ಕೆ ರೂಪದರ್ಶಿಯಾಗಿದ್ದು, ಈಕೆಯ ಪತಿ ಸ್ಯಾಮ್ ಬಾಂಬೆ ಚಿತ್ರೀಕರಣ ಮಾಡಿದ್ದರು.

ಇದನ್ನು ಗಮನಿಸಿದ್ದ ಸ್ಥಳೀಯರು, ಸಾರ್ವಜನಿಕವಾಗಿ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ಕಾಣಕೋಣ ಪೊಲೀಸರಿಗೆ ದೂರನ್ನು ನೀಡಿದ್ದರು. ಈ ದೂರಿನ ಅನ್ವಯ ಇವರ ಚಿತ್ರೀಕರಣಕ್ಕೆ ಭದ್ರತೆ ನೀಡಿದ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪೂನಂ ಪಾಂಡೆ ದಂಪತಿಯನ್ನು ಕಾಣಕೋಣ ಪೊಲೀಸರ ವಶಕ್ಕೆ ನೀಡಲಾಗುವುದು ಎಂದು ಕಲಂಗೂಟ್ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net