

ಮುಂಬೈ: ಬಾಲಿವುಡ್ ನಟಿ ನೂರ್ ಮಾಲಾಬಿಕಾ ದಾಸ್ (37) ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಮುಂಬೈನ ತನ್ನ ಫ್ಲಾಟ್‌ನಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಆದರೆ ಈಕೆ ಶವವನ್ನು ಪೋಷಕರು ತೆಗೆದುಕೊಂಡು ಹೋಗದ ಕಾರಣ ಸ್ನೇಹಿತರೆ ಅಂತಿಮ ವಿಧಿವಿಧಾನ ನಡೆಸಿದ್ದಾರೆ ಎನ್ನಲಾಗಿದೆ.
ಅಂಧೇರಿಯ ಓಶ್ವಿವಾರ ಪ್ರದೇಶದಲ್ಲಿರುವ ಫ್ಲ್ಯಾಟ್‌ನಲ್ಲಿ ನಟಿಯು ವಾಸವಿದ್ದರು. ಅಸ್ಸಾಂ ಮೂಲದವರಾದ ನೂರ್ ಮಾಳವಿಕಾ ದಾಸ್ ಅವರು ನಟನೆಗೆ ಕಾಲಿಡುವ ಮೊದಲು ಕತಾರ್ ಏರ್‌ವೇಸ್‌ನಲ್ಲಿ ಗಗನಸಖಿಯಾಗಿದ್ದರು.
ಲೋಖಂಡ್‌ವಾಲಾದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ 32 ವರ್ಷದ ಬಾಲಿವುಡ್ ನಟಿಯು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್ 6ರಂದೇ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರಿಗೂ ಗೊತ್ತಾಗಿಲ್ಲ. ಮನೆಯಲ್ಲಿ ಯಾರೂ ಇರಲಿಲ್ಲ ಹಾಗೂ ಅಕ್ಕಪಕ್ಕದ ಮನೆಯವರಿಗೂ ವಿಷಯ ಗೊತ್ತಾಗಿಲ್ಲ. ಕೆಲ ದಿನಗಳ ಬಳಿಕ ಅಪಾರ್ಟ್‌ಮೆಂಟ್‌ನಲ್ಲಿ ದುರ್ವಾಸನೆ ಕಂಡುಬಂದಿದ್ದು, ಕೂಡಲೇ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಫ್ಲ್ಯಾಟ್ ಬಾಗಿಲು ತೆಗೆದಾಗ ನಟಿಯ ಶವವು ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.
ತನಿಖೆಯ ಭಾಗವಾಗಿ ಪೊಲೀಸರು ಆಕೆಯ ಮನೆಯಿಂದ ಕೆಲವು ಔಷಧಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಆಕೆಯ ಫ್ಲಾಟ್‌ನಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ನೂರ್ ಸಾವಿನ ಬಗ್ಗೆ ಅವರ ವೃದ್ಧ ಪೋಷಕರಿಗೆ ತಿಳಿಸಿದಾಗ, ನಾವು ಇತ್ತೀಚೆಗೆ ಮುಂಬೈನಿಂದ ಅಸ್ಸಾಂಪಗೆ ಮರಳಿ ಬಂದಿದ್ದೇವೆ, ಮಗಳ ಶವವನ್ನು ತೆಗೆದುಕೊಳ್ಳಲು ಹಿಂತಿರುಗುವುದಿಲ್ಲ ಎಂದು ಹೇಳಿದರು. ಆಕೆಯ ಸ್ನೇಹಿತ ಮತ್ತು ನಟ ಅಲೋಕನಾಥ್ ಪಾಠಕ್ ಅವರು ಎನ್‌ಜಿಒ ಸಹಾಯದಿಂದ ಅಂತಿಮ ವಿಧಿಗಳನ್ನು ನಡೆಸಿದರು.
2023 ರ ಕಾನೂನು ನಾಟಕ ವೆಬ್ ಸರಣಿ 'ದಿ ಟ್ರಯಲ್' ನಲ್ಲಿ ಕಾಜೋಲ್ ಜೊತೆ ನಟಿಸಿದ್ದಾರೆ. ಅದರ ನಂತರ ಅವರು ಅನೇಕ ವೆಬ್ ಶೋಗಳಲ್ಲಿ ನಟಿಸಿದರು. ನೂರ್ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಖಿಲ ಭಾರತೀಯ ಸಿನಿ ಕಾರ್ಮಿಕರ ಸಂಘವು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರನ್ನು ಕೇಳಿದ್ದಾರೆ.